ಕನಕಗಿರಿ ತಾಲೂಕಿನ ಜೀರಾಳದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಕಳಸಗಳೊಂದಿಗೆ ಸ್ವಾಗತಿಸಲಾಯಿತು. ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಕಟ್ಟಿಮನಿ, ಉಪಾಧ್ಯಕ್ಷೆ ಶರಣಮ್ಮ ಭಜಂತ್ರಿ, ಪಿಡಿಟ ಲಕ್ಷ್ಮಣ, ಸದಸ್ಯರಾದ ದುರುಗಪ್ಪ ಕಂದಕೂರು, ಯಲ್ಲಪ್ಪ ಕುಣಿಕೇರಿ, ಶಾರದಾ ಬಸವರಾಜಸ್ವಾಮಿ, ಮುಖಂಡರಾದ ಪಾಮಣ್ಣ, ಸಕ್ರಪ್ಪ, ಶೇಕ್ ಮಹಮ್ಮದ್ ನಾಗರಾಜ ಕಲ್ಮಂಗಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೇಮಣ್ಣ ಭಾವಿಕಟ್ಟಿ ಇತರರಿದ್ದರು.  
ಜಿಲ್ಲೆ

ಗ್ರಾಪಂಗಳಲ್ಲೂ ಸಂವಿಧಾನ ಜಾಗೃತಿ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಪಟ್ಟಣಕ್ಕೆ ಫೆ.10ರಂದು ಆಗಮಿಸಿದ್ದ ಸಂವಿಧಾನ ಜಾಗೃತಿ ರಥಯಾತ್ರೆ ಭಾನುವಾರ ತಾಲೂಕಿನ ವಿವಿಧ ಗ್ರಾಪಂಗಳಿಗೆ ತೆರಳಿದ್ದು, ಜನತೆ ಕುಂಭ, ಕಳಸದೊಂದಿಗೆ ರಥವನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಹಿರೇಖೇಡ, ಸುಳೇಕಲ್, ಜೀರಾಳ, ಚಿಕ್ಕಡಂಕನಕಲ್ ಹಾಗೂ ಕರಡೋಣ ಗ್ರಾಪಂ ಕೇಂದ್ರಗಳಲ್ಲಿ ಸಂವಿಧಾನ ಜಾಗೃತಿ ರಥಯಾತ್ರೆ ಸಂಚರಿಸಿತು. ಶಾಲಾ ಮಕ್ಕಳು ಭಾರತಮಾತೆ, ಅಂಬೇಡ್ಕರ್, ಬಸವೇಶ್ವರ ಹಾಗೂ ಬುದ್ಧನ ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವಿವಿಧೆಡೆ ಸಂವಿಧಾನ ಪ್ರಸ್ತಾವನೆ ಬೋಧಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಮೆರವಣಿಗೆ ಸಾಗುವ ರಸ್ತೆಗಳಲ್ಲಿನ ದಾರ್ಶನಿಕರ ವೃತ್ತಗಳಿಗೂ ಪುಷ್ಪ ನಮನ ಸಲ್ಲಿಸಲಾಯಿತು. ಡೊ ಕುಣಿತ ಹಾಗೂ ಶಾಲಾ ಮಕ್ಕಳಿಂದ ಅಂಬೇಡ್ಕರ್ ಕುರಿತು ಜಾಗೃತಿ ಗೀತೆಗಳು ಗಮನ ಸೆಳೆದವು.

ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಯ್ಯಪ್ಪ ಹಟ್ಟಿ, ದೇವರಾಜ, ಬಸವನಗೌಡ ಸಿದ್ದಲಿಂಗ, ನಿಂಗಪ್ಪ ಶಿಕ್ಷಕರಾದ ಶರಣಪ್ಪ, ಶ್ರೀಕಾಂತ್, ಸತ್ಯಪ್ಪ, ಕಂದಾಯ ನೀರಿಕ್ಷಕ ಹನುಮಂತಪ್ಪ, ಮೇಹಬೂಬ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.