ಕನಕಗಿರಿಯ ಎಪಿಎಂಸಿಯಲ್ಲಿ ಕೆಪಿಸಿಸಿ ಎಸ್ಟಿ ಬ್ಲಾಕ್ ನೂತನ ಕಾರ್ಯದರ್ಶಿ ರಾಮನಗೌಡಗೆ ಕಾಂಗ್ರೆಸ್ ಬೆಂಬಲಿತ ಕುರುಬ ಸಮಾಜದಿಂದ ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸಿದ್ದಪ್ಪ ನೀರ್ಲೂಟಿ, ಕುರುಬರ ಸಂಘದ ತಾಲೂಕು ಅಧ್ಯಕ್ಷ ನಾಗಪ್ಪ ಹುಗ್ಗಿ, ಪ್ರಮುಖರಾದ ದೇವಪ್ಪ ತೋಳದ, ನಿರುಪಾದಿ ಇತರರಿದ್ದರು. 
ಜಿಲ್ಲೆ

ಪಕ್ಷಕ್ಕೆ ದುಡಿದವರಿಗೆ ವಿವಿಧ ಜವಾಬ್ದಾರಿ ಕನಕಗಿರಿ

ಕನಕಗಿರಿ: ಅಧಿಕಾರದ ಹಿಂದೆ ಬೀಳದೆ ಪಕ್ಷಕ್ಕಾಗಿ ದುಡಿವ ನಿಷ್ಠಾವಂತ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷವು ಗುರುತಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸಿದ್ದಪ್ಪ ನೀರ್ಲೂಟಿ ಹೇಳಿದರು.

ಇಲ್ಲಿನ ಎಪಿಎಂಸಿಯಲ್ಲಿ ಕಾಂಗ್ರೆಸ್ ಬೆಂಬಲಿತ ಹಾಲುಮತ ಸಮಾಜದವರಿಂದ ಶನಿವಾರ ಕೆಪಿಸಿಸಿ ಎಸ್ಟಿ ಬ್ಲಾಕ್ ಕಾರ್ಯದರ್ಶಿಯಾಗಿ ನೇಮಕಗೊಂಡ ರಾಮನಗೌಡ ಪಾಟೀಲ್‌ಗೆ ಸನ್ಮಾನಿಸಿ ಮಾತನಾಡಿದರು.

ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಗ್ರಾಮೀಣ ಕಾರ್ಯಕರ್ತರನ್ನು ಗುರುತಿಸಿ ಪಕ್ಷದಲ್ಲಿ ಉನ್ನತ ಹುದ್ದೆಯನ್ನು ನೀಡಿದ್ದರ ಫಲವಾಗಿ ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಮೇಲೆ ದುಡಿದವರನ್ನು ಗುರುತಿಸಿ ಪಕ್ಷ ಹಾಗೂ ಸರ್ಕಾರದಲ್ಲಿ ನಾನಾ ಜವಾಬ್ದಾರಿ ನೀಡಿದೆ ಎಂದರು.

ಬಿಜೆಪಿ ಬಲಿಷ್ಠವಾಗಿದ್ದ ಕಡೆ ಕಾಂಗ್ರೆಸ್ ಬೇರೂರಲು ಶ್ರಮಿಸಿದ ರಾಮನಗೌಡ ಬುನ್ನಟ್ಟಿ ಕುಟುಂಬಕ್ಕೆ ತಾಪಂ ಉಪಾಧ್ಯಕ್ಷರಾಗಲು ಅವಕಾಶ ನೀಡಿತ್ತು. ಬಳಿಕ ತಾಪಂ ಕೆಡಿಪಿ ಸದಸ್ಯನನ್ನಾಗಿ ನೇಮಿಸಲಾಗಿತ್ತು.

ಇದೀಗ ಸಚಿವ ಶಿವರಾಜ ತಂಗಡಗಿ ಆಸಕ್ತಿಯಿಂದಾಗಿ ಕೆಪಿಸಿಸಿ ಎಸ್ಟಿ ಬ್ಲಾಕ್‌ನಲ್ಲಿ ಕಾರ್ಯದರ್ಶಿಯನ್ನಾಗಿಸಿ ಈ ಭಾಗದ ನಾಯಕ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಕೊಡುಗೆ ನೀಡಿದ್ದು, ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗೆ ಸಹಕಾರಿಯಾಗಲಿದೆ ಎಂದರು.

ಕುರುಬರ ಸಂಘದ ತಾಲೂಕು ಅಧ್ಯಕ್ಷ ನಾಗಪ್ಪ ಹುಗ್ಗಿ, ಪ್ರಮುಖರಾದ ದೇವಪ್ಪ ತೋಳದ, ನಿರುಪಾದಿ, ಚಂದ್ರಶೇಖರ ನಾಗಲಾಪುರ, ಹನುಮಂತ ಬಂಕಾಪುರ, ನಾಯಕ ಸಮಾಜದ ಪ್ರಮುಖರಾದ ಶರಣಪ್ಪ ಸೋಮಸಾಗರ, ಶರಣೇಗೌಡ, ಪಂಪಾಪತಿ ಪಚ್ಚಿ, ಕರಿಯಪ್ಪ ಹನುಮನಾಳ ಇತರರಿದ್ದರು.