ಕನಕಗಿರಿ: ಗಣಕಯಂತ್ರದಿಂದ ಕಾರ್ಯದ ವೇಗ ಹೆಚ್ಚಿಸಲು ಸಾಧ್ಯವಾಗಿದೆ ಎಂದು ತಾಪಂ ಇಒ ಕೆ.ರಾಜಶೇಖರ್ ಹೇಳಿದರು. ಇಲ್ಲಿನ ತಾಪಂನಲ್ಲಿ ಶುಕ್ರವಾರ ಗಣಕಯಂತ್ರ ನಿರ್ವಾಹಕರ ದಿನಾಚರಣೆ ನಿಮಿತ್ತ ಕೇಕ್ ಕತ್ತರಿಸಿ ಮಾತನಾಡಿದರು.
ಚಾರ್ಲ್ಸ್ ಬ್ಯಾಬೇಜ್ ಆಧುನಿಕ ಜಗತ್ತಿಗೆ ಕೊಟ್ಟ ಅಮೂಲ್ಯ ಕೊಡುಗೆ ಕಂಪ್ಯೂಟರ್. 21ನೇ ಶತಮಾನದಲ್ಲಿ ಪ್ರತಿ ಕ್ಷೇತ್ರದಲ್ಲಿ ಕಂಪ್ಯೂಟರ್ ಸಹಾಯದಿಂದ ತಾಂತ್ರಿಕತೆ ಮುಂದುವರಿದಿದೆ. ನಾವೆಲ್ಲ ವೇಗವಾಗಿ ಅಂಕಿ ಅಂಶಗಳು, ಲೆಕ್ಕ ಪತ್ರಗಳು, ಡೇಟಾ ಎಂಟ್ರಿ ಇತರ ಇಲಾಖೆ ಕೆಲಸಗಳು ನಿರ್ವಹಣೆ ಮಾಡಲು ಸಹಕಾರಿಯಾಗಿದೆ. ಗ್ರಾಪಂಗಳಲ್ಲಿ ಆಪರೇಟರ್‌ಗಳ ಪಾತ್ರ ಬಹಳ ಮುಖ್ಯ ಎಂದರು.
ನಂತರ ನರೇಗಾ, ಎಸ್‌ಬಿಎಂ, ವಸತಿ ಯೋಜನೆ ಸೇರಿ ವಿವಿಧ ಯೋಜನೆಯ ಪ್ರಗತಿ ಪರಿಶೀಲನೆ ಮಾಡಿದರು. ಅಲ್ಲದೇ, ಕಡಿಮೆ ಪ್ರಗತಿ ಹೊಂದಿರುವ ಗ್ರಾಪಂಗಳು ಕಡ್ಡಾಯವಾಗಿ ಪ್ರಗತಿ ಸಾಧಿಸಲು ಸೂಚಿಸಿದರು. ಸಹಾಯಕ ನಿರ್ದೇಶಕರಾದ ಶರಪೊನ್ನಿಸಾ ಬೇಗಂ, ವೀರಣ್ಣ ನಕ್ರಳ್ಳಿ, ತಾಲೂಕು ಲೆಕ್ಕಾಧಿಕಾರಿ ಗುರುಪ್ರಸಾದ್, ಗ್ರಾಪಂ, ತಾಪಂ ಸಿಬ್ಬಂದಿ ಇದ್ದರು.