ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪಿಐ ಎಂ.ಡಿ. ಫೈಜುಲ್ಲಾ ಅಧ್ಯಕ್ಷತೆಯಲ್ಲಿ ಬಕ್ರೀದ್ ಶಾಂತಿ ಸಭೆ ನಡೆಯಿತು. ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಸದಸ್ಯರಾದ ಹನುಮಂತ ಬಸರಿಗಿಡ, ಶಾಂತಪ್ಪ ಬಸರಿಗಿಡ ಇತರರಿದ್ದರು.  
ಜಿಲ್ಲೆ

ಶಾಂತಿಯುತವಾಗಿ ಬಕ್ರೀದ್ ಆಚರಿಸಿ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಮುಸ್ಲಿಮರು ಬಕ್ರೀದ್‌ಅನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಪಿಐ ಎಂ.ಡಿ. ಫೈಜುಲ್ಲಾ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬಕ್ರೀದ್ ಶಾಂತಿಸಭೆಯಲ್ಲಿ ಮಾತನಾಡಿದರು. ತ್ಯಾಗದ ಹಬ್ಬವೆಂದೇ ಕರೆಯುವ ಬಕ್ರೀದ್ ಸಂಭ್ರಮದಿಂದ ಆಚರಿಸಲು ಎಲ್ಲ ಸಮುದಾಯಗಳು ಸಹಕಾರ ನೀಡಬೇಕು.

ಈದ್ಗಾ ಮೈದಾನಕ್ಕೆ ಶಾಂತಿಯುತವಾಗಿ ತೆರಳಿ ಪ್ರಾರ್ಥನೆ ಸಲ್ಲಿಸಬೇಕು. ಕುರ್ಬಾನಿ ಕೊಡುವ ಮೂಲಕ ಮುಸ್ಲಿಮರು ಹಬ್ಬ ಆಚರಿಸಲಿದ್ದು, ಒಗ್ಗಟ್ಟಾಗಿ ಹಬ್ಬವನ್ನು ಆಚರಿಸಿ ಎಂದು ತಿಳಿಸಿದರು.