ಕನಕಗಿರಿ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸ.ಪ್ರ.ದ. ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಕಾಲೇಜಿನ ಭೂದಾನಿ ಬಸವರಾಜ ಗುಗ್ಗಳಶೆಟ್ರ ಉದ್ಘಾಟಿಸಿದರು. ತಾಲೂಕು ಖಜಾನೆ ಅಧಿಕಾರಿ ರಾಜೇಂದ್ರ, ಪ್ರಾಧ್ಯಾಪಕರಾದ ಡಾ. ಆಶಿಕಾ, ಮರ್ವಿನ್ ಡಿಸೋಜಾ, ರಕ್ಷಿತ್, ಡಾ. ವೀರೇಶ ಕೆಂಗಲ್, ಸರ್ವಮಂಗಳಮ್ಮ ಇತರರಿದ್ದರು.  
ಜಿಲ್ಲೆ

ವಿದ್ಯಾರ್ಥಿಗಳಿಗೆ ಸಾಧಕರು ಮಾದರಿಯಾಗಲಿ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಶೈಕ್ಷಣಿಕವಾಗಿ ಶ್ರಮಿಸಿದರೆ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿದೆ ಎಂದು ಮುದಗಲ್ ಸ.ಪ್ರ.ದ. ಕಾಲೇಜಿನ ಪ್ರಾಧ್ಯಾಪಕ ಭೀಮಾಶಂಕರಪ್ಪ ಪೂಜಾರ ಹೇಳಿದರು.

ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸ.ಪ್ರ.ದ. ಕಾಲೇಜಿನಲ್ಲಿ ಶನಿವಾರ 2025-26ನೇ ಸಾಲಿನ ಪ್ರಥಮ ವರ್ಷದ ಬಿಎ, ಬಿಕಾಂ ಹಾಗೂ ಬಿಎಸ್‌ಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡತನದ ಬೇಗೆಯಲ್ಲೂ ಅಧ್ಯಯನ ಮಾಡಿ ಉನ್ನತ ಹುದ್ದೆಗಳ ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ. ಇವರನ್ನು ಎಲ್ಲ ವಿದ್ಯಾರ್ಥಿಗಳು ಮಾದರಿಯಾಗಿಟ್ಟುಕೊಳ್ಳಬೇಕು ಎಂದರು.

ಪ್ರಾಚಾರ್ಯ ಬಜರಂಗಬಲಿ ಮಾತನಾಡಿ, ಉತ್ಸಾಹದ ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನೇ ಬದಲಿಸಬಲ್ಲರು. ಓದಿನತ್ತ ಮಹತ್ವ ಕೊಟ್ಟು ಬಂಗಾರದ ಜೀವನ ನಿಮ್ಮದಾಗಿಸಿಕೊಳ್ಳಿ ಎಂದರು. ಭೂದಾನಿ ಬಸವರಾಜ ಗುಗ್ಗಳಶೆಟ್ರ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕಿ ಲಲಿತಾ ಕಿನ್ನಾಳ್, ತಾಲೂಕು ಖಜಾನೆ ಅಧಿಕಾರಿ ರಾಜೇಂದ್ರ, ಪ್ರಾಧ್ಯಾಪಕರಾದ ಡಾ. ಆಶಿಕಾ, ಮರ್ವಿನ್ ಡಿಸೋಜಾ, ರಕ್ಷಿತ್, ಡಾ. ವೀರೇಶ ಕೆಂಗಲ್, ಸರ್ವಮಂಗಳಮ್ಮ, ನಫೀಸ್‌ಬಾನು, ಸಂಗಮೇಶ ಹನುಮನಾಳ, ಅತಿಥಿ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಗೋಪಾಲರೆಡ್ಡಿ ಮಾದಿನಾಳ ಇತರರಿದ್ದರು.