ಕನಕಗಿರಿಯಲ್ಲಿ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ದೀಪ ಬೆಳಗಿ ನಮನ ಸಲ್ಲಿಸಲಾಯಿತು. ಮೇಲ್ವಿಚಾರಕರಾದ ತುಗಲೆಪ್ಪ ದೇಸಾಯಿ, ವೀರೇಶ ಚಕ್ರಸಾಲಿ, ಸಿಡಿಪಿಒ ವಿರೂಪಾಕ್ಷ, ಪಪಂ ಸದಸ್ಯರಾದ ಶೇಷಪ್ಪ ಪೂಜಾರಿ ಇತರರಿದ್ದರು.  
ಜಿಲ್ಲೆ

ಸಂವಿಧಾನ ಶಿಲ್ಪಿಗೆ ದೀಪ ನಮನ

ಕನಕಗಿರಿ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಡಾ.ಬಿ.ಆರ್ ಅಂಬೇಡ್ಕರ್ 67ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ದೀಪಗಳನ್ನು ಬೆಳೆಗಿಸಲಾಯಿತು.

ಬುಧವಾರ ಸಂಜೆ ವೃತ್ತವನ್ನು ಸುತ್ತುವರಿದ ಶಾಲಾ-ಮಕ್ಕಳು ಹಾಗೂ ಪ್ರಮುಖರು ದೀಪ ಹಚ್ಚಿ ಅಂಬೇಡ್ಕರ್ ಘೋಷಣೆ ಕೂಗಿದರು. ನೂರಾರು ಜನ ದೀಪ ಬೆಳಗಿಸುವ ಮುಖೇನ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದರು.

ತಾಪಂ ಇಒ ಚಂದ್ರಶೇಖರ ಕಂದಕೂರು, ಗ್ರೇಡ್2 ತಹಸೀಲ್ದಾರ್ ವಿ.ಎಚ್. ಹೊರಪೇಟೆ, ಪಿಎಸ್‌ಐ ಕಾಸಿಂಸಾಬ್ ಅಕ್ರೋಳ್ಳಿ, ಎಎಸ್‌ಐ ಲಕ್ಕಪ್ಪ, ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ತುಗಲೆಪ್ಪ ದೇಸಾಯಿ, ವೀರೇಶ ಚಕ್ರಸಾಲಿ, ಸಿಡಿಪಿಒ ವಿರೂಪಾಕ್ಷ, ಪಪಂ ಸದಸ್ಯರಾದ ಶೇಷಪ್ಪ ಪೂಜಾರಿ, ಹನುಮಂತ ಬಸರಿಗಿಡ, ನೂರ್‌ಸಾಬ್ ಗಡ್ಡಿಗಾಲ, ಕಂಠಿರಂಗಪ್ಪ ನಾಯಕ, ಮುಖಂಡರಾದ ಸಣ್ಣ ಕನಕಪ್ಪ, ಲಿಂಗಪ್ಪ ಪೂಜಾರಿ, ಪಾಮಣ್ಣ ಅರಳಿಗನೂರು, ವೆಂಕಟೇಶ ನಿರ್ಲೂಟಿ, ನೀಲಕಂಠ ಬಡಿಗೇರ, ಕನಕಪ್ಪ ಮ್ಯಾಗಡೆ, ಸಣ್ಣ ದುರುಗಪ್ಪ ಗೋರಾಳಕೇರಿ, ರವಿ ಭಜಂತ್ರಿ, ಶರಣಪ್ಪ ಟೆಂಗುಂಟಿ ಇತರರಿದ್ದರು.