ಕುಕನೂರು ತಾಲೂಕಿನ ಕುದರಿಮೋತಿಯಲ್ಲಿ ಆಯೋಜಿಸಿದ್ದ ಜಯಂತ್ಯುತ್ಸವ ಕಾರ್ಯಕ್ರಮವನ್ನು ತಿಂಥಣಿ ಶ್ರೀ ಸಿದ್ದರಾಮನಂದ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ವಿಜಯ ಮಹಾಂತ ಸ್ವಾಮೀಜಿ, ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಪರೀದಾಬೇಗಂ, ಯಲಬುರ್ಗಾ ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪೋಲಿಸ ಪಾಟೀಲ್ ಇದ್ದರು. 
ಜಿಲ್ಲೆ

ಕನಕದಾಸರ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಶ್ರೀ ಸಿದ್ದರಾಮನಂದ ಸ್ವಾಮೀಜಿ ಆಶೀರ್ವಚನ

Gangavati - Desk - Veeresh S Ullagaddi

ಕುಕನೂರು: ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ತಿಂಥಣಿ ಶ್ರೀ ಸಿದ್ದರಾಮನಂದ ಸ್ವಾಮೀಜಿ ಹೇಳಿದರು.


ತಾಲೂಕಿನ ಕುದರಿಮೋತಿಯಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬುಧವಾರ ಆಶೀರ್ವಚನ ನೀಡಿದರು. ಸಮಾಜದಲ್ಲಿ ಬಡವ, ಶ್ರೀಮಂತ, ಮೇಲು ಕೀಳು ಎಂಬ ಭೇದವಿಲ್ಲದೇ ನೆಮ್ಮದಿ ಜೀವನ ನಡೆಸಬೇಕು. ಪ್ರತಿಯೊಬ್ಬರು ಕನಕದಾಸರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.


ಶ್ರೀ ವಿಜಯ ಮಹಾಂತ ಸ್ವಾಮೀಜಿ ಮಾತನಾಡಿ, ಇಂದಿನ ವಿಜ್ಞಾನ, ತಂತ್ರಜ್ಞಾನ ಯುಗದಲ್ಲಿಯೂ ಸಾಮಾಜಿಕ ಸಮಾನತೆ ಸಾಧ್ಯವಾಗದಿರುವುದು ನೋವಿನ ವಿಚಾರವಾಗಿದೆ. ಕನಕದಾಸರ ಮಾರ್ಗದಲ್ಲಿ ಮುನ್ನಡೆಯುವಂತೆ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.


ಬಾದಿಮನಾಳದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಕನಕದಾಸರ ಕೃತಿಗಳಲ್ಲಿ ಭಕ್ತಿಯ ಜತೆಗೆ ಜೀವನಕ್ಕೆ ಅಗತ್ಯವಿರುವ ಎಲ್ಲ ಮೌಲ್ಯಗಳಿವೆ. ಮೋಹನ ತರಂಗಿಣಿ, ನಳ ಚರಿತ್ರೆ ಅಮೂಲ್ಯ ಕೃತಿಗಳಾಗಿವೆ ಎಂದರು.


ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿವಿಜಯಕುಮಾರ ದಾಸರ, ಸದಸ್ಯ ಶರಣಯ್ಯ ಜಂಗಮೂರು, ಕುಕನೂರು ಘಟಕದ ಅಧ್ಯಕ್ಷ ಮಂಜುನಾಥ ಕಡೇಮನಿ, ಸಕ್ರಪ್ಪ ಚೌಡಕಿ, ಹನುಮಗೌಡ ಪಾಟೀಲ್, ಪ್ರಮುಖರಾದ ರವಿ ಕಟ್ಟಗಿ, ಮಂಜುನಾಥ ಗಟ್ಟೆಪ್ಪನವರ, ಶಿವಕುಮಾರ ರಾಜೂರು, ಅಮರೇಶ ತಲ್ಲೂರು, ಸುಭಾಷ್ ಈಡಿಗೇರ್, ಪಾಮಪ್ಪ ಹನ್ಮಟ್ಟಿ, ಅಶೋಕ ಗಟ್ಟೆಪ್ಪನವರ, ಪಂಪಾಪತಿ ವಣಗೇರಿ ಇತರರಿದ್ದರು.