ಐನಾಪುರ: ಸಮಾಜದ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಕನಕದಾಸರ ಕೊಡುಗೆ ಸ್ಮರಣೀಯ ಎಂದು ಗುರುದೇವ ಆಶ್ರಮದ ಬಸವೇಶ್ವರ ಸ್ವಾಮೀಜಿ ಹೇಳಿದರು.
ಗ್ರಾಮದ ಗುರುದೇವ ಆಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ತಿಕ ಮಾಸದ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳು ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ ಎಂದರು.
ವಿಜಯಪುರ ಆಶ್ರಮದ ಷಡಕ್ಷರಿ ಸ್ವಾಮೀಜಿ ಮಾತನಾಡಿದರು. ಶಿಕ್ಷಕ ಸಂಜಯ ಕೋಳಿ ಮಹಾಪ್ರಸಾದ ಸೇವೆ ಸಲ್ಲಿಸಿದರು. ಮಲಪ್ಪ ಬುರ್ಕೆ, ಭಜನಾ ಕಲಾವಿದ ಸುಭಾಸ ಗಸ್ತಿ, ಶಿವಗೌಡ ಚೌಗಲಾ ಹಾಗೂ ಸಂಗಡಿಗರು ಭಕ್ತಿಸೇವೆ ಸಲ್ಲಿಸಿದರು. ಕೋಳಿ ಕುಟುಂಬದವರನ್ನು ಶ್ರೀಗಳನ್ನು ಸನ್ಮಾನಿಸಿದರು. ತಮ್ಮಣ್ಣ ಪಾರಶೆಟ್ಟಿ, ಶ್ರೀಶೈಲ ಅಪರಾಜ, ರಾವಸಾಹೇಬ ಚೌಗಲಾ. ತಮ್ಮಣ್ಣ ಕಮತೆ, ಮೃತ್ಯುಂಜಯ ಹವಳೆ, ಅಶೋಕ ಚೌಕಾ, ಪ್ರೇಮಾ ಕೋಳಿ, ಅಭಿಷೇಕ ಕೋಳಿ, ಭಾಗ್ಯಶ್ರೀ ಕೋಳಿ ಇತರರಿದ್ದರು. ವಿರೂಪಾಕ್ಷ ಡೂಗನವರ ನಿರೂಪಿಸಿದರು. ಪ್ರಕಾಶ ಕೋರ್ಬು ವಂದಿಸಿದರು.