ಜಿಲ್ಲೆ

ಪ್ರಗತಿಯತ್ತ ಕನಕದಾಸ ಅರ್ಬನ್​ ಸೊಸೆಟಿ

ಸೋಮಲಿಂಗ ತಳವಾರ

ಸವದತ್ತಿ: ಪಟ್ಟಣದ ಕನಕದಾಸ ಅರ್ಬನ್​ ಕೋ&ಆಪ್​ ಕ್ರೆಡಿಟ್​ ಸೊಸೆಟಿ 18.79 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗಿದೆ ಎಂದು ಸಂದ ಅಧ್ಯ ನೀಲಪ್ಪ ಅಣ್ಣಿಗೇರಿ ಮಾಹಿತಿ ನೀಡಿದರು.

ಇಲ್ಲಿನ ಕನಕದಾಸ ಅರ್ಬನ್​ ಕ್ರೆಡಿಟ್​ ಸೊಸೆಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 23ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಸಂ 58.52 ಲಕ್ಷ ರೂ. ಷೇರು ಬಂಡವಾಳ, 4.16 ಕೋಟಿ ರೂ. ಠೇವಣಿ, 85.73 ಲಕ್ಷ ರೂ. ನಿಧಿ ಹೊಂದಿ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು. ನಿವತ್ತ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ, ನಿವತ್ತ ಕೆಎಸ್​ಆರ್​ಟಿಸಿ ಚಾಲಕರಾದ ದೇವೇಂದ್ರ ಅಣ್ಣಿಗೇರಿ, ಮರಿತಮ್ಮಪ್ಪ ನಾಯ್ಕರ, ಗ್ರಾಮ ಲೆಕ್ಕಾಧಿಕಾರಿಗಳಾದ ಮಲ್ಲಮ್ಮ ತುರಾಯಿ ಮತ್ತು ಬಸವರಾಜ ಪಟ್ಟದಕಲ್ಲ ಅವರನ್ನು ಸಂದಿಂದ ಸನ್ಮಾನಿಸಲಾಯಿತು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಕಬ್ಬಿನ ವಾರ್ಷಿಕ ವರದಿ ಓದಿದರು. ಸಂದ ಉಪಾಧ್ಯ ಸೋಮಲಿಂಗ ತುರಾಯಿ, ನಿರ್ದೇಶಕರಾದ ಮಲ್ಲಪ್ಪ ಹಣಸಿ, ಅಜ್ಜಪ್ಪ ಹಳ್ಳದ, ನಿಂಗಪ್ಪ ಮೀಶಿ, ಯಲ್ಲಪ್ಪ ಬರಿಗಾಲ, ಧಮೇರ್ಂದ್ರ ತುರಾಯಿ, ಶಿವನಗೌಡ ಪಾಟೀಲ, ಗೌರವ್ವ ಶಿರೂರ, ಕಸ್ತೂರಿ ಬಮ್ಮಣಗಿ, ಮೋಹನ ಸಂಶಿ, ಶಾಂತಾ ಬಾಗಲಕೋಟ ಇತರರಿದ್ದರು. ಹುಸೇನಸಾಬ್​ ನದ್​ಾ ನಿರೂಪಿಸಿದರು.