ಕಾಗವಾಡ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಶಾಸಕ ರಾಜು ಕಾಗೆ, ತಹಸೀಲ್ದಾರ್ ರಾಜೇಶ ಬುರ್ಲಿ, ಸಂಜೀವಕುಮಾರ ಸದಲಗೆ, ಕೆ.ಕೆ. ಗಾವಡೆ ಇತರರಿದ್ದರು. 
ಜಿಲ್ಲೆ

ಕನಕದಾಸರು ಎಲ್ಲರಿಗೂ ಪ್ರೇರಣೆ

ಪ್ರಶಾಂತ ಹೂಗಾರ

ಕಾಗವಾಡ: ಕನಕದಾಸರ ತತ್ತ್ವ, ಆದರ್ಶಗಳು ಇಂದಿಗೂ ಜೀವಂತವಾಗಿವೆ. ಅವರ ಸಾಹಿತ್ಯ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಪಟ್ಟಣದಲ್ಲಿ ಕನಕ ಜಯಂತಿ ನಿಮಿತ್ತ ಗುರುವಾರ ಕನಕದಾಸ ಹಾಗೂ ವೀರ ರಾಣಿ ಓನಕೆ ಓಬವ್ವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ತಹಸೀಲ್ದಾರ್ ರಾಜೇಶ ಬುರ್ಲಿ ಮಾತನಾಡಿ, ಪ್ರತಿಯೊಬ್ಬರೂ ಮಹಾತ್ಮರ ವ್ಯಕ್ತಿತ್ವ ರೂಢಿಸಿಕೊಂಡು ಒಳ್ಳೆಯ ಮಾರ್ಗದಲ್ಲಿ ಸಾಗಬೇಕು ಎಂದರು.

ಸಿಡಿಪಿಒ ಸಂಜೀವಕುಮಾರ ಸದಲಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಉಪತಹಸೀಲ್ದಾರ್ ಅಣ್ಣಾಸಾಬ ಕೋರೆ, ಸದಾಶಿವ ಪೂಜಾರಿ, ಪ್ರಕಾಶ ಢಂಗ, ರಾವಸಾಬ್ ಜುಗಳೆ, ಸಚಿನ್ ವಾಘಮೋರೆ, ಸಂಜು ವಾಘಮೋರೆ, ರಾಜೇಂದ್ರ ಬಾಗೆ, ರಾಜು ಚುಂಗ್, ಅರುಣ ವಾಘಮೋರೆ, ಅಣ್ಣಪ್ಪ ಖೋತ್, ಸಿದ್ದು ಒಡೆಯರ, ಚಿದಾನಂದ ಅವಟಿ, ರಮೇಶ ಚೌಗಲೆ, ಕಾಕಾ ಪಾಟೀಲ, ಜ್ಯೋತಿಕುಮಾರ ಪಾಟೀಲ ಇತರರಿದ್ದರು.