ಕನಕಗಿರಿಯ ಕನಕಾಚಲ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಭಕ್ತರ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು. ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ, ಪ್ರಮುಖರಾದ ಸುದರ್ಶನರೆಡ್ಡಿ, ನಾಗರಾಜ ತೆಗ್ಯಾಳ, ಹನುಮೇಶ ಸೇರಿ ಇತರರಿದ್ದರು. 
ಜಿಲ್ಲೆ

ಕನಕಾಚಲಪತಿ ಹುಂಡಿಯಲ್ಲ 2.84 ಲಕ್ಷ ರೂ. ಸಂಗ್ರಹ

ಪ್ರವೀಣ ಉದುಸಾ ದಲಬಂಜನ್

ಕನಕಗಿರಿ: ಪಟ್ಟಣದ ಐತಿಹಾಸಿಕ ಕನಕಾಚಲ ದೇವಸ್ಥಾನದ ಹುಂಡಿಗಳನ್ನು ಶುಕ್ರವಾರ ಎಣಿಕೆ ಮಾಡಲಾಗಿದ್ದು, ಒಂದು ತಿಂಗಳಲ್ಲಿ 2,84,950 ರೂ. ಕಾಣಿಕೆ ಸಂಗ್ರಹವಾಗಿದೆ.

ಒಂದು ತಿಂಗಳಿನಲ್ಲಿ ಲಕ್ಷ ರೂ. ಸಂಗ್ರಹ

ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ನೇತೃತ್ವದಲ್ಲಿ ಕಂದಾಯ ಇಲಾಖೆ, ದೇವಸ್ಥಾನದ ಸಿಬ್ಬಂದಿ, ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತರ ನೇತೃತ್ವದಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ತೆರೆದು ಸಂಗ್ರಹವಾದ ಕಾಣಿಕೆಯನ್ನು ಎಣಿಕೆ ಮಾಡಲಾಗಿದೆ. ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಯನ್ನು ದೇವಸ್ಥಾನದ ಖಾತೆಗೆ ಜಮಾ ಮಾಡಲಾಗುವುದು. ಆ.30ರಂದು ದೇವಸ್ಥಾನ ಹುಂಡಿಗಳನ್ನು ಎಣಿಕೆ ಮಾಡಲಾಗಿತ್ತು ಎಂದು ಕಾರ್ಯದರ್ಶಿ ಸಿದ್ಧಲಿಂಗಯ್ಯಸ್ವಾಮಿ ತಿಳಿಸಿದರು. ಕೀರ್ತಿಕುಮಾರ್, ಸುದರ್ಶನರೆಡ್ಡಿ, ನಾಗರಾಜ ತೆಗ್ಯಾಳ, ಹನುಮೇಶ ಸೇರಿ ಇತರರಿದ್ದರು.

ಇದನ್ನೂ ಓದಿ: