ಕನಕಗಿರಿ: ಪಟ್ಟಣದ ಐತಿಹಾಸಿಕ ಕನಕಾಚಲಪತಿ ದೇವಸ್ಥಾನದ ಹುಂಡಿಗಳನ್ನು ಮಂಗಳವಾರ ಎಣಿಕೆ ಮಾಡಿದ್ದು, 3,00,160 ರೂ. ಸಂಗ್ರಹವಾಗಿದೆ. ತಹಸೀಲ್ದಾರ್ ಧನಂಜಯ್ ಮಾಲಗಿತ್ತಿ ನೇತೃತ್ವದಲ್ಲಿ ದೇವಸ್ಥಾನದ ಏಳು ಕಾಣಿಕೆ ಹುಂಡಿಗಳನ್ನು ಎಣಿಕೆ ಮಾಡಲಾಯಿತು.
ಎರಡು ತಿಂಗಳಲ್ಲಿ ಮೂರು ಲಕ್ಷ ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ದೇವಸ್ಥಾನದ ಕಾರ್ಯದರ್ಶಿ ಸಿದ್ದಲಿಂಗಯ್ಯ, ದೇವಸ್ಥಾನ ಸಮಿತಿಯ ಸದಸ್ಯ ಕೀರ್ತಿ ಸೋನಿ, ಪ್ರಮುಖರಾದ ಸುದರ್ಶನ ರೆಡ್ಡಿ, ನಾರಾಯಣರೆಡ್ಡಿ, ಸೋಮನಾಥ ಮಲ್ಲಾಪುರ, ಶ್ರೀನಿವಾಸ ಅಯ್ಯರ್ ಇತರರು ಇದ್ದರು.