ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಹುಂಡಿಯಲ್ಲಿನ ಕಾಣಿಕೆಯನ್ನು ಎಣಿಕೆ ಮಾಡಲಾಯಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಪ್ರಮುಖರಾದ ಸುದರ್ಶನರೆಡ್ಡಿ, ಸೋಮನಾಥ ಇತರರಿದ್ದರು. 
ಜಿಲ್ಲೆ

ಕನಕಾಚಲ ದೇವಸ್ಥಾನದ ಹುಂಡಿ ಹಣ ಎಣಿಕೆ

ಕನಕಗಿರಿ: ಕಳೆದ 45 ಹಿಂದೆಯಷ್ಟೇ ಎಣಿಕೆ ಮಾಡಲಾಗಿದ್ದ ಇಲ್ಲಿನ ಕನಕಾಚಲ ದೇವಸ್ಥಾನದ ಕಾಣಿಕೆ ಪೆಟ್ಟಿಗೆಗಳನ್ನು ತಹಸೀಲ್ದಾರ್ ವಿಶ್ವನಾಥ ಮುರುಡಿ ನೇತೃತ್ವದಲ್ಲಿ ಗುರುವಾರ ಎಣಿಕೆ ಮಾಡಲಾಯಿತು. ಒಟ್ಟು 2,98,220 ರೂ. ಸಂಗ್ರಹವಾಗಿದೆ. ಕಾಣಿಕೆ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಸಂದಾಯ ಮಾಡಲಾಯಿತು. 5ಗ್ರಾಂ ಬಂಗಾರ ಕಾಣಿಕೆ ಪೆಟ್ಟಿಗೆಯಲ್ಲಿದ್ದು, ದೇವಸ್ಥಾನದಲ್ಲಿ ಇಟ್ಟುಕೊಳ್ಳಲಾಗಿದೆ. ಶಿರಸ್ತೇದಾರ ಅನಿತಾ ಇಂಡಿ, ಪ್ರಮುಖರಾದ ಕೀರ್ತಿಸೋನಿ, ಸುದರ್ಶನರೆಡ್ಡಿ, ಸೋಮನಾಥ ಮಲ್ಲಾಪುರ, ಕನಕರೆಡ್ಡಿ ಮಹಲಿನಮನಿ, ಬಿ.ವಿ ಜೋಷಿ, ಸಿಬ್ಬಂದಿ ಸಿದ್ದಲಿಂಗಯ್ಯ ಇತರರಿದ್ದರು.