ಜಿಲ್ಲೆ

ಕನಕ ಮಾರ್ಗ ಪ್ರಶಸ್ತಿ ಪ್ರದಾನ ಸಮಾರಂಭ

ಅವಿನಾಶ್ ಜೈನಹಳ್ಳಿ

ಮೆಸೂರು: ಅಖಿಲ ಕರ್ನಾಟಕ ಕನಕ ಮತ್ತು ರಾಯಣ್ಣ ಸಾಂಸ್ಕೃತಿಕ ಟ್ರಸ್ಟ್, ಅಖಿಲ ಕರ್ನಾಟಕ ಕನಕ ಮತ್ತು ರಾಯಣ್ಣ ನೌಕರರ ಒಕ್ಕೂಟ ಹಾಗೂ ಮಹಾದಾಸ ಶ್ರೀ ಭಕ್ತ ಕನಕದಾಸ ಸೇವಾ ಸಮಿತಿಯು ಕನಕ ಜಯಂತಿ ಪ್ರಯುಕ್ತ ಕನಕ ಮಾರ್ಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ತೊಣಚಿಕೊಪ್ಪಲಿನ ಗಣೇಶ ಭಂಡಾರ್ ವೃತ್ತದಲ್ಲಿ ಡಿ.16 ರಂದು ಸಂಜೆ 5.30ಕ್ಕೆ ಏರ್ಪಡಿಸಿದೆ.

ಮಾಧ್ಯಮ ಕ್ಷೇತ್ರದ ಅಂಶಿ ಪ್ರಸನ್ನಕುಮಾರ್, ಕಲಾಕ್ಷೇತ್ರದ ಮಿಮಿಕ್ರಿ ಗೋಪಾಲ್, ವೈದ್ಯಕೀಯ ಕ್ಷೇತ್ರದ ಡಾ.ಅಬ್ದುಲ್ ಖಾದರ್, ಸಾಹಿತ್ಯ ಕ್ಷೇತ್ರದ ಡಾ.ಲಿಂಗದಳ್ಳಿ ಹಾಲಪ್ಪ, ಡಾ.ಡಿ.ರವಿ, ಡಾ.ಕೆ.ಇ.ಗೋವಿಂದೇಗೌಡ, ಸಮಾಜ ಸೇವಕ ಆರ್.ಮಹದೇವ ಅವರಿಗೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಪ್ರಶಸ್ತಿ ಪ್ರದಾನ ಮಾಡುವರು. ನಂತರ ಮಿಮಿಕ್ರಿ ಗೋಪಿ ಹಾಸ್ಯಸಂಜೆ ನಡೆಸಿಕೊಡುವರು.

ಟ್ರಸ್ಟ್‌ನ ಅಧ್ಯಕ್ಷ ಡಾ. ಮಹೇಶ ಚಿಕ್ಕಲ್ಲೂರು ಕಾರ್ಯಕ್ರಮ ನಿರ್ವಹಿಸುವರು. ಎಂ. ಶಿವಕುಮಾರ್, ಮಹೇಂದ್ರ ಕಾಗಿನೆಲೆ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.