ಬೆಟ್ಟದಪುರ ಸಮೀಪದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡಲಾಯಿತು. ನಾಗಶೆಟ್ಟಿ, ರಜನಿಕಾಂತ್, ದೇವರಾಜು, ಸ್ವಾಮಿ, ಮಾದನಾಯಕ್ ಇದ್ದರು.  
ಜಿಲ್ಲೆ

ಬೆಟ್ಟದಪುರದಲ್ಲಿ ಕನಕ ಜಯಂತಿ ಆಚರಣೆ

ಶಿವಶಂಕರ್ ಎಂ. ಹೆಬ್ಬಳ್ಳ

ಬೆಟ್ಟದಪುರ: ಬೆಟ್ಟದಪುರ ಸಮೀಪದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕನಕದಾಸರ 538ನೇ ಜಯಂತಿಯನ್ನು ಆಚರಿಸಲಾಯಿತು.

ಗಣಿತ ಶಿಕ್ಷಕ ರಜನಿಕಾಂತ್ ಮಾತನಾಡಿ, ಮಾನವ ಮಾನವರ ನಡುವೆ ಯಾವುದೇ ಮೇಲು, ಕೀಳು ಭಾವನೆ ಬರಬಾರದು, ಸಮಾನತೆಯ ಭಾವನೆಯನ್ನು ಎಲ್ಲ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕನಕದಾಸರ ಕೀರ್ತನೆಗಳ ಸಾರವನ್ನು ಎಲ್ಲರೂ ಅರಿಯಬೇಕು ಮತ್ತು ಅನುಸರಿಸಬೇಕು ಎಂದು ತಿಳಿಸಿದರು.

ಶಿಕ್ಷಕ ದೇವರಾಜ್ ಕನಕದಾಸರ ಕೀರ್ತನೆಯನ್ನು ಹಾಡಿ ಮಕ್ಕಳಿಗೆ ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆಯನ್ನು ತಿಳಿಸಿದರು. ಶಾಲೆಯ ಮುಖ್ಯಶಿಕ್ಷಕ ನಾಗಶೆಟ್ಟಿ, ಶಿಕ್ಷಕರಾದ ಸ್ವಾಮಿ, ಮಾದನಾಯಕ್, ಚಲುವರಾಜು, ರವಿ, ಇಂದ್ರಮ್ಮ, ಪುಷ್ಪಲತಾ ಇದ್ದರು.