ನೇತ್ರಾವತಿ ಕೊಲೆಯಾದ ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು ಭೇಟಿ ಪರಿಶೀಲಿಸಿದರು. 
ಜಿಲ್ಲೆ

ಅತ್ಯಾಚಾರವೆಸಗಿ ಮಹಿಳೆಯ ಹತ್ಯೆ

ಕಾನಹೊಸಹಳ್ಳಿ: ಮಹಿಳೆಯ ಅತ್ಯಾಚಾರವೆಸೆಗಿ, ಆಕೆ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿ ಶುಕ್ರವಾರ ತಡರಾತ್ರಿ ತಿಪ್ಪೇಹಳ್ಳಿ ಹೊರವಲಯದಲ್ಲಿ ಕೊಲೆ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಅಬ್ಬೇನಹಳ್ಳಿಯ ಅವಿವಾಹಿತೆ ನೇತ್ರಾವತಿ (30) ಮೃತಳು. ಈಕೆ ಮಾನಸಿಕ ಅಸ್ವಸ್ಥಳಾಗಿದ್ದು, ಸುತ್ತಲಿನ ಗ್ರಾಮಗಳಲ್ಲಿ ಓಡಾಡುತ್ತಿದ್ದಳು. ಮಾನಸಿಕ ಅಸ್ವಸ್ಥತೆಯನ್ನು ದುರ್ಬಳಕೆ ಮಾಡಿಕೊಂಡ ಕೊಲೆಗಾರರು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು, ನಂತರ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ಕೊಲೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ರಕ್ತ ಮಡುವಿನಲ್ಲಿ ರಕ್ತಸಿಕ್ತ ಶವ ಕಂಡು ಮರಗಿದ್ದಾರೆ ಮತ್ತು ಕೊಲೆ ಭೀಕರತೆಗೆ ಬೆಚ್ಚಿಬಿದ್ದಿದ್ದಾರೆ. ಬಡ ಕುಟುಂಬದ ನೇತ್ರಾವತಿಯ ತಂದೆ ಮೃತರಾಗಿದ್ದು, ತಾಯಿ, ಸಹೋದರ-ಸಹೋದರಿ ಆಶ್ರಯದಲ್ಲಿದ್ದರು. 10 ವರ್ಷ ಬಾಲಕಿಯಾಗಿದ್ದಾಗ ಮಾನಸಿಕ ಕಾಯಿಲೆ ಆವರಿಸಿತ್ತು. ಈಕೆಗೆ ಮದುವೆ ಅಗಿರಲಿಲ್ಲ. ಆದರೆ, ಒಬ್ಬ ಮಗಳಿಗೆ ತಾಯಿಯಾಗಿದ್ದು, ಅ ಮಗು ನೇತ್ರಾವತಿ ಕುಟುಂಬದ ಆಶ್ರಯದಲ್ಲಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು ಭೇಟಿ ನೀಡಿದರು. ಶ್ವಾನದಳ, ಬೆರಳಚ್ಚು ತಜ್ಞರ ತಂಡ ಅಗಮಿಸಿತ್ತು. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಕಾನಹೊಸಹಳ್ಳಿ ಪಿಎಸೈ ಸಿದ್ದರಾಮಪ್ಪ ಬಿದರಾಣಿ ಪರಿಶೀಲನೆ ನಡೆಸಿದರು.

ರೋದಿಸುತ್ತಿರುವ ಕೊಲೆಯಾದ ನೇತ್ರಾವತಿ ಕುಟುಂಬಸ್ಥರು.