ಕಾನಹೊಸಹಳ್ಳಿ: ಹೋಬಳಿ ಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಮಾಡಿಸುವುದರ ಜತೆಯಲ್ಲಿ ರೈತರ ಪರವಾಗಿ ಕೆಲಸ ಮಾಡುವುದಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಇಲ್ಲಿನ ಮುಖ್ಯರಸ್ತೆಯಿಂದ ರೈತ ಸಂಪರ್ಕ ಕೇಂದ್ರದವರಿಗೆ ಸಿಸಿ ರಸ್ತೆ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಬಹುತೇಕ ರೈತರು ಕಚೇರಿಗೆ ತೆರಳಲು ರಸ್ತೆ ಮತ್ತು ಅಗತ್ಯ ಸೌಲಭ್ಯಗಳ ಕೊರತೆಯಿದೆ ಎಂದು ಮನವಿ ಸಲ್ಲಿಸಿದ್ದರು.
ನಾನು ಶಾಸಕನಾದ ಮೇಲೆ ನೂತನ ಕಚೇರಿ ಆರಂಭಕ್ಕೆ ಚಾಲನೆ ನೀಡಿದ್ದೆ. ಸದ್ಯ 33 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿರುವೆ. ಮುಂದಿನ ದಿನಗಳಲ್ಲಿ ಕುಡಿವ ನೀರು ಮತ್ತು ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯ ಸುರೇಶ್, ಕೃಷಿ ಇಲಾಖೆ ಉಪ ನಿರ್ದೇಶಕ ನಯೀಂ ಪಾಷಾ, ಕೃಷಿ ಅಧಿಕಾರಿ ಚೈತ್ರಾ, ಮುಖಂಡರಾದ ಜಿ.ಪಿ.ಗುರುಲಿಂಗಪ್ಪ, ಬಿ.ಜಗದೀಶ್, ಎಳನೀರು ಗಂಗಣ್ಣ, ಲಕ್ಕಜ್ಜಿ ಮಲ್ಲಿಕಾರ್ಜುನ, ದುಗ್ಗಪ್ಪ, ಮಂಜುನಾಥ, ಮಂಜುನಾಥಸ್ವಾಮಿ, ಕಲಹಳ್ಳಿ ವೆಂಕಟೇಶ್, ಹರೀಶ್, ಪರುಶಪ್ಪ, ತಿಪ್ಪೇಸ್ವಾಮಿ, ರೈತ ಸಂಪರ್ಕ ಕೇಂದ್ರದ ರಾಮಕೃಷ್ಣ, ರಾಕೇಶ್, ಚನ್ನಪ್ಪ, ಅವಿನಾಶ್, ಸಣ್ಣನಾಗಪ್ಪ, ತಿಪ್ಪೇಸ್ವಾಮಿ ಇದ್ದರು.