ಹಿರೇಕುಂಬಳಗುಂಟೆ ಗ್ರಾಮದಲ್ಲಿ ಶುಕ್ರವಾರ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಗಂಗಮ್ಮ ಕರಿಬಸಪ್ಪ, ಹಿರೇಕುಂಬಳಗುಂಟೆ ಉಮೇಶ್, ಗುರುಸಿದ್ದನಗೌಢ, ಪಿಡಿಒ ನಿಂಗಪ್ಪ ಇತರರಿದ್ದರು. 
ಜಿಲ್ಲೆ

ಗುಣಮಟ್ಟದ ಕಾಮಗಾರಿ ಮಾಡಿ

ನರೇಶ್ ಕುಮಾರ್

ಕಾನಹೊಸಹಳ್ಳಿ: ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಅಭಿವೃದ್ಧಿ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಗ್ರಾಮದ ಎಸ್ಸಿ ಕಾಲನಿ, ಎಸ್.ಇಮಡಾಪುರ, ಹಿರೇಕುಂಬಳಗುಂಟೆ, ಚಿಕ್ಕಕುಂಬಳಗುಂಟೆ ಗ್ರಾಮದಲ್ಲಿ ಪ್ರಗತಿ ಕಾಲನಿ ಯೋಜನೆಯಡಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ ಸೇರಿ ಅಗತ್ಯ ಸೌಲಭ್ಯಗಳ ಅಭಿವೃದ್ಧಿಗಾಗಿ ಅನುದಾನ ತರಲಾಗಿದೆ. ಗುತ್ತಿಗೆದಾರರು ಯಾವುದೇ ಲೋಪವಾಗದಂತೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.

ಪ್ರಮುಖರಾದ ಕೆ.ಎಂ.ಶಶಿಧರ್, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ನಾಗೇಂದ್ರಪ್ಪ, ವೀರೇಶ್ವರಯ್ಯ, ಪ್ರಭಾಕರ್, ಚನ್ನಬಸಪ್ಪ, ಸಂಗಪ್ಪ ಇದ್ದರು.