ಕಾನಹೊಸಹಳ್ಳಿ ನಾಡಕಚೇರಿಯ ಕಂದಾಯ ನಿರೀಕ್ಷಕ ಮುರಳಿ ಕೃಷ್ಣಗೆ ಆಟೋ, ಕಾರು ಮತ್ತು ಲಾರಿ ಚಾಲಕ, ಮಾಲೀಕರ ಯೂನಿಯನ್ ಮನವಿ ಸಲ್ಲಿಸಿತು. ಯೂನಿಯನ್ ಕಾನಹೊಸಹಳ್ಳಿ ಘಟಕದ ಅಧ್ಯಕ್ಷ ಕೆ.ಎಸ್.ವಿಶ್ವನಾಥ, ಉಪಾಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಪ್ರಭು, ಖಜಾಂಜಿ ನಾಗೇಶ್, ಗ್ರಾಪಂ ಅಧ್ಯಕ್ಷ ಚೇತನ್ ಎ.ಸಿ, ಚೇತನ್, ಮುಖಂಡರಾದ ಎಚ್.ಬಿ.ಸತೀಶ್, ಸೂರ್ಯಪ್ರಕಾಶ್, ರಾಘವೇಂದ್ರ ಇತರರಿದ್ದರು. 
ಜಿಲ್ಲೆ

ಪ್ರಸ್ತಾವಿತ ಮೋಟಾರ್ ಕಾಯ್ದೆ ಅನುಷ್ಠಾನ ಮಾಡದಿರಿ

ಪ್ರವೀಣ ಉದುಸಾ ದಲಬಂಜನ್

ಕಾನಹೊಸಹಳ್ಳಿ: ಪ್ರಸ್ತಾವನೆ ಹಂತದಲ್ಲಿರುವ ಮೋಟಾರ್ ವಾಹನ ಕಾಯ್ದೆ ವಿರೋಧಿಸಿ ಆಟೋ, ಕಾರು ಮತ್ತು ಲಾರಿ ಚಾಲಕ, ಮಾಲೀಕರ ಯೂನಿಯನ್‌ನಿಂದ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರದ ಪ್ರಸ್ತಾವಿತ ಕಾಯ್ದೆಯಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂ. ದಂಡ ಚಾಲಕರಿಗೆ ನುಂಗಲಾಗದ ತುತ್ತಾಗಲಿದೆ. ಚಾಲಕರು ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಅಲ್ಲದೆ ಬೀದಿಗೆ ಬೀಳುವ ಸ್ಥಿತಿ ಬರಬಹುದು. ಕಾಯ್ದೆಯನ್ನು ಅನುಷ್ಠಾನ ಮಾಡದೆ ಚಾಲಕರ ಹಿತ ಕಾಯಬೇಕಿದೆ ಎಂದು ಯೂನಿಯನ್ ಕಾನಹೊಸಹಳ್ಳಿ ಘಟಕದ ಅಧ್ಯಕ್ಷ ಕೆ.ಎಸ್.ವಿಶ್ವನಾಥ ಆಗ್ರಹಿಸಿದರು. ನಾಡಕಚೇರಿಯ ಕಂದಾಯ ನಿರೀಕ್ಷಕ ಮುರಳಿ ಕೃಷ್ಣಗೆ ಮನವಿ ಸಲ್ಲಿಸಿದರು.