ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ವಿಷಯ ನಿರ್ವಾಹಕಿ ಅನಿತಾ ಪೂಜಾರ, ಗ್ರಾಮಲೆಕ್ಕಿಗ ಶ್ರೀನಿವಾಸ್ ಕೊಂಡಿ, ಸಿಬ್ಬಂದಿ ಸಿದ್ದೇಶ್, ಆಗ್ರಹಾರ ಮಂಜುನಾಥ, ಬೋರಣ್ಣ, ಕುಂಬಾರ ಹನುಮಂತಪ್ಪ, ವಕೀಲ ಹನುಮಂತರೆಡ್ಡಿ ಇತರರಿದ್ದರು. 
ಜಿಲ್ಲೆ

ವಚನಗಳು ಎಂದಿಗೂ ಪ್ರಸ್ತುತ

ಕಾನಹೊಸಹಳ್ಳಿ: ಸಮಾಜದ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣರ ಪೈಕಿ ಹಡಪದ ಅಪ್ಪಣ್ಣ ಅವರೂ ಒಬ್ಬರು ಎಂದು ನಾಡಕಚೇರಿ ವಿಷಯ ನಿರ್ವಾಹಕಿ ಅನಿತಾ ಪೂಜಾರ ತಿಳಿಸಿದರು.

ಗ್ರಾಮದ ನಾಡಕಚೇರಿಯಲ್ಲಿ ಗುರುವಾರ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಸಮಾಜದಲ್ಲಿದ್ದ ಮೌಢ್ಯ ಆಚರಣೆಗಳ ವಿರುದ್ಧ ಮತ್ತು ಸಮ ಸಮಾಜಕ್ಕಾಗಿ ವಚನಗಳನ್ನು ರಚಿಸಿ ಆಕ್ರೋಶವನ್ನು ಹೊರ ಹಾಕಿದ ಮಹಾನ್ ಶರಣ ಹಡಪದ ಅಪ್ಪಣ್ಣ ಆಗಿದ್ದು, ಅವರ ಚಿಂತನೆ ಮತ್ತು ವಚನಗಳು ಎಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.