ಜಿಲ್ಲೆ

ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸುವೆ; ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿಕೆ

Ballari

ಕಾನಹೊಸಹಳ್ಳಿ : ಕ್ಷೇತ್ರದ ಪ್ರತಿ ಹಳ್ಳಿಗೂ ಅಗತ್ಯ ರಸ್ತೆ, ಕುಡಿವನೀರು ಸೇರಿ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಅನುದಾನ ತಂದು ಸರ್ವಾಂಗೀಣ ಅಭಿವೃದ್ಧಿ ಕೈಗೊಂಡಿರುವುದಾಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಸಮೀಪದ ಕರಡಿಹಳ್ಳಿ ಗ್ರಾಮದಲ್ಲಿ ಹಾದುಹೋದ 12.5ಕೋಟಿ ರೂ. ವೆಚ್ಚದ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ರಸ್ತೆಯಿಂದ ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಸಂಪರ್ಕಿಸಲು ಅನುಕೂಲವಾಗಲಿದೆ. ಪ್ರತಿ ಗ್ರಾಮಕ್ಕೂ ಸುಗಮ ರಸ್ತೆ, ಕುಡಿವನೀರು, ಒಳಚರಂಡಿ ವ್ಯವಸ್ಥೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಬಹುತೇಕ ಗ್ರಾಮಗಳಲ್ಲಿ ಕೊರತೆಯಿರುವ ಶಾಲಾ ಕೊಠಡಿಗಳನ್ನು ನಿರ್ಮಿಸಿ ಶೈಕ್ಷಣಿಕ ಅಭಿವೃದ್ಧಿ ಕೈಗೊಳ್ಳಲಾಗಿದೆ.

ಪಿಡಬ್ಲ್ಯುಡಿ ಎಇ ನಾಗನಗೌಡ, ದೀನಾ ಮಂಜುನಾಥ, ಬಿ.ಭೀಮೇಶ್, ಮಾಜಿ ತಾಪಂ ಸದಸ್ಯರಾದ ಹುಡೇಂ ಪಾಪನಾಯಕ, ರಾಜಕುಮಾರನಾಯ್ಕ, ಎನ್.ಪಿ.ಮಂಜುನಾಥ, ಇತರರಿದ್ದರು.