ಗುಡೇಕೋಟೆ ಗ್ರಾಪಂ ಆವರಣದಲ್ಲಿ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಏರ್ಪಡಿಸಿದ್ದ ಕಾರ್ಯವನ್ನು ಬುಧವಾರ ಗ್ರಾಪಂ ಅಧ್ಯಕ್ಷ ಕೃಷ್ಣ ಉದ್ಘಾಟಿಸಿದರು. ತಾಪಂ ಮಾಜಿ ಉಪಾಧ್ಯಕ್ಷೆ ವಿಶಾಲಾಕ್ಷಿ ರಾಜಣ್ಣ, ಮಾಜಿ ಗ್ರಾಪಂ ಅಧ್ಯಕ್ಷರಾದ ಶಿವರಾಜವರ್ಮ, ಲಲಿತಮ್ಮ ಗೋವಿಂದಪ್ಪ, ರತ್ನಮ್ಮ ಚಿನ್ನಸ್ವಾಮಿ, ಪಿಡಿಒ ಮಹಾಂತೇಶಯ್ಯ ಇದ್ದರು.  
ಜಿಲ್ಲೆ

ಸ್ವ ಉದ್ಯೋಗಕ್ಕೆ ಗೃಹಲಕ್ಷ್ಮೀ ಯೋಜನೆ ಹಣ ವಿನಿಯೋಗವಾಗಲಿ

ಕಾನಹೊಸಹಳ್ಳಿ: ಗೃಹಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ ಸರ್ಕಾರ ನೀಡುವ ಹಣವನ್ನು ಸ್ವ ಉದ್ಯೋಗಕ್ಕೆ ವಿನಿಯೋಸಿ ಸ್ವಾವಲಂಬಿ ಜೀವನ ನಡೆಸಬೇಕೆಂದು ಗುಡೇಕೋಟೆ ಗ್ರಾಪಂ ಅಧ್ಯಕ್ಷ ಕೃಷ್ಣ ಹೇಳಿದರು.

ಸಮೀಪದ ಗುಡೇಕೋಟೆ ಗ್ರಾಪಂ ಆವರಣದಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಸರ್ಕಾರ ಮಹಿಳೆಯರನ್ನು ಅರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆ ಜಜಾರಿಗೆ ತಂದಿದೆ. ಇದರ ಪ್ರಯೋಜನೆ ಪಡೆವ ಯಜಮಾನಿಯರು, ಹಣವನ್ನು ದುರುಪಯೋಗ ಮಾಡದೆ ಸಣ್ಣ ವ್ಯಾಪಾರ-ವಹಿವಾಟು ನಡೆಸಲು ಬಳಸಬೇಕೆಂದು ಸಲಹೆ ನೀಡಿದರು.

ತಾಪಂ ಮಾಜಿ ಉಪಾಧ್ಯಕ್ಷೆ ವಿಶಾಲಾಕ್ಷಿ ರಾಜಣ್ಣ ಮಾತನಾಡಿ, ಸರ್ಕಾರ ಮಹಿಳಾ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಉಪಯೋಗ ಪಡೆಯುವವರು ಸೋಮಾರಿಗಳಾಗದೆ ಉತ್ತಮ ಜೀವನ ನಡೆಸಬೇಕು. ಆಗ ಮಾತ್ರ ಸರ್ಕಾರ ಆಶಯ ಈಡೇರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಾಳೇಗಾರ ವಂಶಸ್ಥ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಜವರ್ಮ, ಮಾಜಿ ಅಧ್ಯಕ್ಷೆ ಲಲಿತಮ್ಮ ಗೋವಿಂದಪ್ಪ, ಉಪಾಧ್ಯಕ್ಷೆ ರತ್ನಮ್ಮ ಚಿನ್ನಸ್ವಾಮಿ, ಸದಸ್ಯರಾದ ಸುನೀತಾ, ಸಣ್ಣಕ್ಕ, ಅನಿತಮ್ಮ, ಬಸಮ್ಮ, ಪ್ರಭಾಕರ, ಮಂಜುನಾಥ, ಸಣ್ಣಬೊಮ್ಮಣ್ಣ, ಲಕ್ಷ್ಮೀದೇವಿ, ರಮೇಶ್, ಪಿಡಿಒ ಮಹಾಂತೇಶಯ್ಯ ಮತ್ತಿತರರಿದ್ದರು.