ಕಾನಹೊಸಹಳ್ಳಿ: ಸರ್ಕಾರದ ಸೌಲಭ್ಯ ಬಳಸಿಕೊಂಡು ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕು ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಸುದೇಶ್ ಜೆ.ಮಲಾಜುರೆ ಹೇಳಿದರು.
ಚಿಕ್ಕಜೋಗಿಹಳ್ಳಿ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಬುಧವಾರ ವಿಜ್ಞಾನ ಜ್ಯೋತಿ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದರು.
ವಿದ್ಯಾಯದಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್ಸ್, ಕೆಎಎಸ್, ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಮೂಲಕ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ವಿದ್ಯಾಲಯದಲ್ಲಿ ನೀಟ್, ಜೆಟ್ ಕೋಚಿಂಗ್ ಸಹ ಕಳೆದ ಎರಡು ವರ್ಷಗಳಿಂದ ನೀಡಲಾಗುತ್ತಿದೆ. ಇದರಿಂದ ಕಳೆದ ವರ್ಷ ಶೇ.100 ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದರು.
ಉಪ ಪ್ರಾಚಾರ್ಯ ಯು.ಎಸ್.ಬಳ್ಳಾರು, ವಿಜ್ಞಾನ ಉಪನ್ಯಾಸಕಿ ಎನ್.ಶಾಂತಿ, ಚಂದ್ರಶೇಖಯ್ಯ, ಜಫ್ರುಲ್, ಚಂದ್ರಕಾಂತ ಇನಾಮ್‌ದಾರ್, ಮಲ್ಲಪ್ಪ ಇದ್ದರು.