ಕಾನಹೊಸಹಳ್ಳಿ: ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.
ಸಮೀಪದ ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯ ವಿದ್ಯಾಲಯದ ಆವರಣದಲ್ಲಿ 12ನೇ ಬ್ಯಾಚ್‌ನ ಹಳೇ ವಿದ್ಯಾರ್ಥಿಗಳ ಸಂಘ ಭಾನುವಾರ ಆಯೋಜಿಸಿದ್ದ ಸ್ಮತಿ-2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಯಲ್ಲಿ ಹುಟ್ಟಿರುವೆ. ಪರಿಶ್ರಮದಿಂದ ಉನ್ನತ ವ್ಯಾಸಂಗದಿಂದ ಜಿಲ್ಲಾಧಿಕಾರಿಯಾಗಿರುವೆ. ಅಲ್ಲದೆ ಜವಾಹರ್ ನವೋದಯ ವಿದ್ಯಾಲಯದ ಅಧ್ಯಕ್ಷನಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಅದಕ್ಕೆ ಶೈಕ್ಷಣಿಕ ವಲಯದ ಪರಿಸರವು ಕಾರಣವೆಂದರು. ವಿದ್ಯಾಲಯದ ಹಳೇ ವಿದ್ಯಾರ್ಥಿ ಹೃದಯರೋಗ ತಜ್ಞ ನರೇಂದ್ರಗೌಡ ಮಾತನಾಡಿ, ವಿದ್ಯಾಲಯದಲ್ಲಿ ಕಲಿತವರು ಉತ್ತಮ ಶಿಕ್ಷಣ ಪಡೆದ ಉನ್ನತ ಹುದ್ದೆ ಪಡೆದುಕೊಂಡು ದೇಶವಿದೇಶ, ರಾಜ್ಯದ ವಿವಿಧ ಭಾಗದಲ್ಲಿ ಸೇವೆ ಮಾಡುವ ಭಾಗ್ಯ ಲಭಿಸಿದೆ. ಅದಕ್ಕಾಗಿ ಸಾಮಾಜಿಕ ಸೇವೆ ಮಾಡುವ ಮೂಲಕ ಸಮಾಜದ ಋಣ ತೀರಿಸುವ ಪ್ರಯತ್ನ ಮಾಡಬೇಕು. ಹಾಗು ನವೋದಯ ವಿದ್ಯಾಲಯದ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಬೇಕು ಮತ್ತು ಭವಿಷ್ಯ ರೂಪಿಸಿದ ಹತ್ತಾರು ಶಿಕ್ಷಕರ ಪರಿಶ್ರಮ ಮರೆಯಬಾರದು ಎಂದರು.
ಧಾರವಾಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗು ಹಳೇ ವಿದ್ಯಾರ್ಥಿ ಡಾ.ಸಂದೀಪ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ.ಜಂಬುನಾಥ ಮಾತನಾಡಿದರು. ವೇದಿಕೆಯಲ್ಲಿ ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜರೆ ಅಧ್ಯಕ್ಷತೆ ವಹಿಸಿದ್ದರು, ಉಪ ಪ್ರಾಚಾರ್ಯ ಯು.ಎಸ್.ಬಳ್ಳಾರಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶರಣಬಸವ, ಪ್ರಮುಖರಾದ ಬಿ.ನಾಗರಾಜ್, ಹೇಮೇಶ್‌ಗೌಡ, ಡಾ.ಕಲ್ಲೇಶ್‌ಪಾಟೇಲ್, ಮುಡಾ ಆಯುಕ್ತ ಪ್ರಸನ್ನಕುಮಾರ್, ಡಾ.ಮಲ್ಲಿಕಾರ್ಜುನ, ಡಾ.ಮನೋಹಗೌಡ, ಡಾ.ರಾಜಶೇಖರ್, ಡಾ. ರಾಹುಲ್ ಪ್ರತಾಪ್, ನಿಲಕಂಠಚಾರಿ ಇತರರಿದ್ದರು.