ಭೀಮಸಮುದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಂದಾದೀಪ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪ್ರಾದೇಶಿಕ ಯೋಜನಾಧಿಕಾರಿ ಸುಧಾದೀಪ ಚಾಲನೆ ನೀಡಿದರು. ಪ್ರಮುಖರಾದ ಕೆ.ವಾಮದೇವ, ಯು.ಜಂಬಣ್ಣ, ರೇಣುಕಾ, ಲತಾ, ರೇಖಾ ನೀರಲಕೇರಿ, ಕೊಟ್ರಮ್ಮ ಇದ್ದರು. 
ಜಿಲ್ಲೆ

ಯೋಜನೆಯ ಸದಸ್ಯರ ಅಭಿವೃದ್ಧಿಗಾಗಿ ಜ್ಞಾನವಿಕಾಸ

ಕಾನಹೊಸಹಳ್ಳಿ: ಅರ್ಥಿಕವಾಗಿ ಹಿಂದುಳಿದ ಮಹಿಳೆಯರು ಸಂಘದ ಸದಸ್ಯರಾಗಿ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಜನ ಪಡೆದ ಸ್ವಾವಲಂಬಿ ಜೀವನ ಸಾಗಿಸಲಿ ಎಂದು ಕೊಪ್ಪಳ ಪ್ರಾದೇಶಿಕ ವಲಯದ ಜ್ಞಾನವಿಕಾಸ ಕೇಂದ್ರದ ಯೋಜನಾಧಿಕಾರಿ ಸುಧಾದೀಪ ತಿಳಿಸಿದರು.

ಸಮೀಪದ ಭೀಮಸಮುದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಂದಾದೀಪ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೇಮಾವತಿ ವಿ.ಹೆಗ್ಗಡೆ ಅವರ ಕನಸಿನಂತೆ ಜ್ಞಾನವಿಕಾಸ ಕಾರ್ಯಕ್ರಮಗಳು ನಡೆಯುತ್ತಿವೆ. ಯೋಜನೆಯ ಸದಸ್ಯರ ಮಕ್ಕಳಿಗೆ ವೃತ್ತಿಪರ ಶಿಕ್ಷಣಕ್ಕಾಗಿ ಸುಜ್ಞಾನನಿಧಿ ಶಿಷ್ಯ ವೇತನ, ಅಂಗವಿಕಲರಿಗೆ, ಆರ್ಥಿಕ ಅಭಿವೃದ್ಧಿಗಾಗಿ ಪ್ರಗತಿ ನಿಧಿ ಕಾರ್ಯಕ್ರಮ ಸೇರಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಒಕ್ಕೂಟದ ಅಧ್ಯಕ್ಷೆ ಲತಾ, ಮುಖಂಡ ವಾಮದೇವ ಮಾತನಾಡಿದರು.

ಚೇರ್ ಗೇಮ್, ಲಿಂಬು ಚಮಚ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚಿಕ್ಕಜೋಗಿಹಳ್ಳಿ ವಲಯದ ಮೇಲ್ವಿಚಾರಕಿ ರೇಣುಕಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖಂಡ ಜಂಬಣ್ಣ, ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ರೇಖಾ ನೀರಲಕೇರಿ, ಸೇವಾಪ್ರತಿನಿಧಿ ಕೊಟ್ರಮ್ಮ ಇತರರಿದ್ದರು.