ಜಿಲ್ಲೆ

ಕಾನಹೊಸಹಳ್ಳಿಯಲ್ಲಿ ಲಾರಿಗೆ ಕಾರು ಡಿಕ್ಕಿ, ವಿಜಯಪುರ-ಯಾದಗಿರಿ ಮೂಲದ ಮೂವರು ಸಾವು

ಕಾನಹೊಸಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರು ಮತ್ತು ಲಾರಿ ನಡುವೆ ಶನಿವಾರ ಮಧ್ಯರಾತ್ರಿ ಅಪಘಾತ ಸಂಭವಿಸಿ, ಮೂವರು ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್ ತಾಲೂಕು ಮಿನಜಿಗಿ ಗ್ರಾಮದ ಕಾರು ಚಾಲಕ ದೇವರಾಜ್ (21), ಭೀಮರಾಯ (38) ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಪ್ಪರಗಿ ಗ್ರಾಮದ ಅಂಜಿನಿದೇವಿ (14) ಮೃತರು.

ಪಟ್ಟಣದಲ್ಲಿ ಶನಿವಾರ ಸಂಜೆ ಮಳೆಯಾಗಿ, ಹೆದ್ದಾರಿ ಫ್ಲೈಓವರ್ ಮೇಲೆ ನೀರು ಸಂಗ್ರಹವಾಗಿತ್ತು. ಬೆಂಗಳೂರಿಂದ ವಿಜಯಪುರ ಕಡೆಗೆ ಹೋಗುವಾಗ ನೀರು ಇರುವುದನ್ನು ಗಮನಿಸದ ಕಾರು ಚಾಲಕ, ಅದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಪಕ್ಕದ ರಸ್ತೆಯಲ್ಲಿ ಕೂಡ್ಲಿಗಿಯಿಂದ ಬರುತ್ತಿದ್ದ ಲಾರಿಗೆ ಡಿವೈಡರ್ ದಾಟಿ ಡಿಕ್ಕಿ ಹೊಡೆದಿದ್ದಾನೆ. ಘಟನೆ ನಂತರ ಎರಡು ತಾಸು ಟ್ರಾಫಿಕ್ ಜಾಮ್ ಅಗಿತ್ತು.