ಜಿಲ್ಲೆ

ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಘಟಿಕೋತ್ಸವ

ಸೌಮ್ಯ ಆರ್

ಉಳ್ಳಾಲ: ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಫಿಸಿಯೋಥೆರಪಿ, ನರ್ಸಿಂಗ್ ಸೈನ್ಸ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆ ದ್ವಿತೀಯ ವರ್ಷದ ಘಟಿಕೋತ್ಸವ ಮೇ 3ರಂದು ಬೆಳಗ್ಗೆ 10.30ಕ್ಕೆ ನಾಟೆಕಲ್‌ನಲ್ಲಿರುವ ಕಣಚೂರು ಕಾನ್ಫರೆನ್ಸ್ ಡ್ರೋಮ್‌ನಲ್ಲಿ ನಡೆಯಲಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಕಣಚೂರು ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ.ಮೊಹಮ್ಮದ್ ಸೊಹೈಲ್ ಮಾತನಾಡಿ, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಆಥಿಕ್ ಪದವಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಸ್ಟೇಟ್ ಅಲೈಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಫರೀದ್ ಮುಖ್ಯ ಅತಿಥಿಯಾಗಿರುವರು, ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಯು.ಕೆ.ಮೋನು ಅಧ್ಯಕ್ಷತೆ ವಹಿಸಲಿದ್ದಾರೆಂದು ತಿಳಿಸಿದರು.

203 ಪ್ಯಾರಾಮೆಡಿಕಲ್ ಕಾಲೇಜುಗಳ ಪೈಕಿ, ರಿನಲ್ ಡಯಾಲಿಸಿಸ್ ತಂತ್ರಜ್ಞಾನ ವಿಭಾಗದಲ್ಲಿ ಶಿಜಾನಾ ಬಿ.ಎಸ್.ಸಿ. ಓವರಾಲ್ ಟಾಪರ್ ಆಗಿದ್ದಾರೆ. ಅವರು ಮೊದಲನೇ ವರ್ಷದ ರಿನಲ್ ಡಯಾಲಿಸಿಸ್ ತಂತ್ರಜ್ಞಾನದಲ್ಲಿ ದ್ವಿತೀಯ ಸ್ಥಾನ, ದ್ವಿತೀಯ ವರ್ಷದಲ್ಲಿ ಪ್ರಥಮ ಸ್ಥಾನ ಮತ್ತು ಮೂರನೇ ವರ್ಷದಲ್ಲಿ ಆರನೇ ಸ್ಥಾನ ಗಳಿಸಿದ್ದಾರೆ. 2025ನೇ ಸಾಲಿನ ಡಾ.ಕಣಚೂರ್ ಮೋನು ಚಿನ್ನದ ಪದಕಕ್ಕೆ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ವಿಭಾಗದಲ್ಲಿ ಡಾ.ಅಸ್ಮಿತಾ ಶ್ರೇಷ್ಠಾ ಹಾಗೂ ಮಾಸ್ಟರ್ಸ್ ಆಫ್ ಫಿಸಿಯೋಥೆರಪಿ ವಿಭಾಗದಲ್ಲಿ ಡಾ.ಅಥುಲ್ಯಾ ಪಿ.ಕೆ.ಆಯ್ಕೆಯಾಗಿದ್ದಾರೆ ಎಂದರು.

ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಪ್ರಾಂಶುಪಾಲೆ ಡಾ.ಶಮೀಮಾ ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಅಡಿಯಲ್ಲಿ ಕಣಚೂರು ಫಿಸಿಯೋಥೆರಪಿ ಕಾಲೇಜಿನ ಒಟ್ಟು 14 ವಿದ್ಯಾರ್ಥಿಗಳು ವಿವಿ ಮಟ್ಟದಲ್ಲಿ ಶ್ರೇಷ್ಠ ಸ್ಥಾನ ಗಳಿಸಿದ್ದಾರೆ. ಸ್ನಾತಕೋತ್ತರ ಪೂರ್ವದ ಅಧ್ಯಯನ ವಿಭಾಗದಲ್ಲಿ ಡಾ.ಅಸ್ಮಿತಾ ಶ್ರೇಷ್ಠಾ ಯೂನಿವರ್ಸಿಟಿ ಟಾಪರ್ ಪ್ರಥಮ ರ‌್ಯಾಂಕ್ ಪಡೆಯುವುದರ ಜತೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದಿದ್ದಾರೆ.

ಡಾ.ಆರ್ಜಿ ಶಾ ಒಟ್ಟು 7 ರ‌್ಯಾಂಕ್‌ನೊಂದಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದಿದ್ದಾರೆ. ಡಾ.ಕೃತಿಕಾ 4ನೇ ವರ್ಷ 2ನೇ ರ‌್ಯಾಂಕ್ ಡಾ.ಅಫೀಫಾ ಪಿ.ಬಿ. 4ನೇ ವರ್ಷ 9ನೇ ರ‌್ಯಾಂಕ್ ಪಡೆದಿದ್ದಾರೆ.

ಫಿಸಿಯೋಥೆರಪಿ ಉಪಪ್ರಾಂಶುಪಾಲೆ ರೇಷ್ಮಾ ಸುದ್ದಿಗೋಷ್ಠಿಯಲ್ಲಿದ್ದರು.

ಸ್ನಾತಕೋತ್ತರ(ಎಂಪಿಟಿ) ವಿಭಾಗದಲ್ಲಿ ಸಾಧನೆ

ಕಾರ್ಡಿಯೋವಾಸ್ಕುೃಲರ್ ಮತ್ತು ಪಲ್ಮನರಿ ಸೈನ್ಸ್ ವಿಭಾಗದಲ್ಲಿ ಡಾ.ಅತುಲ್ಯಾ ಪಿ.ಕೆ. 1ನೇ ರ‌್ಯಾಂಕ್ ಮೂಲಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 27ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಡಾ.ಜಿಷ್ನಾ ಎಂ.ಎಂ. 4ನೇ ರ‌್ಯಾಂಕ್, ಡಾ.ಅಲೀನಾ ಜಾರ್ಜ್ 8ನೇ ರ‌್ಯಾಂಕ್, ಡಾ.ಅಮಿನಾ ಎಸ್.9ನೇ ರ‌್ಯಾಂಕ್, ಕಮ್ಯೂನಿಟಿ ಹೆಲ್ತ್ ಫಿಸಿಯೋಥೆರಪಿ ವಿಭಾಗದಲ್ಲಿ ಡಾ.ಫೈಸಲ್ ಮಜೀದ್ ರ‌್ಯಾಂಕ್, ಮಸ್ಕುಲೋಸ್ಕೆಲೆಟಲ್ ಸೈನ್ಸಸ್ ವಿಭಾಗದಲ್ಲಿ ಡಾ.ಶಿಫಾನಿ ಐದನೇ ರ‌್ಯಾಂಕ್, ಡಾ.ಮರಿಯಾ ಶಾಹ್ಜಹಾನ್ ಆರನೇ ರ‌್ಯಾಂಕ್, ಡಾ.ಆಯೇಶಾ ಇಸ್ಮತ್ ಏಳನೇ ರ‌್ಯಾಂಕ್ ಹಾಗೂ ಕ್ರೀಡಾ ವಿಜ್ಞಾನ ವಿಭಾಗದಲ್ಲಿ ಡಾ.ಶುಹೈಲ್ ಆರನೇ ರ‌್ಯಾಂಕ್, ಡಾ.ಭಿಸ್ಕರ್ ಪ್ರಿಯಲ್ ಅನಿಲ ಏಳನೇ ರ‌್ಯಾಂಕ್ ಪಡೆದಿದ್ದಾರೆಂದು ತಿಳಿಸಿದರು.