ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಜಿಲ್ಲಾ ಪದಾಧಿಕಾರಿಗಳು ತಹಸೀಲ್ದಾರ್ ಗೌಸಿಯಾಬೇಗಂಗೆ ಬುಧವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ಅಖಂಡ ಬಳ್ಳಾರಿ ಜಿಲ್ಲೆಗಾಗಿ ಹೋರಾಟ ಮಾಡುವುದಾಗಿ ಮನವಿ ಸಲ್ಲಿಸಿದ ಹೋರಾಟ ಸಮಿತಿ

ಕಂಪ್ಲಿ: ಬಳ್ಳಾರಿ ಜಿಲ್ಲೆ ವಿಭಜನೆ ಅವೈಜ್ಞಾನಿಕವಾಗಿದ್ದು, ವಿಭಜನೆ ಮಾಡಬಾರದು. ಅಖಂಡ ಬಳ್ಳಾರಿ ಜಿಲ್ಲೆಗಾಗಿ ನಿರಂತರ ಹೋರಾಟ ಹಮ್ಮಿಕೊಳ್ಳಲಾಗವುದು ಎಂದು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಜಿಲ್ಲಾ ಪದಾಧಿಕಾರಿಗಳಾದ ಕುಡತಿನಿ ಶ್ರೀನಿವಾಸ್ ಮತ್ತು ದರೂರು ಪುರುಷೋತ್ತಮಗೌಡ ತಿಳಿಸಿದರು.

ತಹಸೀಲ್ದಾರ್ ಗೌಸಿಯಾಬೇಗಂಗೆ ಬುಧವಾರ ಮನವಿ ಸಲ್ಲಿಸಿ, ಸಚಿವ ಆನಂದ್‌ಸಿಂಗ್ ಅವರು ಮನಸೋ ಇಚ್ಛೆಗೆ ಬಳ್ಳಾರಿ ಜಿಲ್ಲೆ ವಿಭಜಿಸಿದ್ದಾರೆಯೇ ಹೊರತು ಆಡಳಿತ ದೃಷ್ಟಿಯಿಂದಲ್ಲ. ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಗಿಂತ ದೊಡ್ಡದಾಗಿರುವ ಜಿಲ್ಲೆಗಳ ವಿಭಜನೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಕನ್ನಡಿಗರು ಅಲ್ಪಸಂಖ್ಯಾತರಾಗಲಿದ್ದಾರೆ. ಗಡಿಜಿಲ್ಲೆಗಳನ್ನು ವಿಭಜಿಸದೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಜಿಲ್ಲೆ ವಿಭಜನೆಯಿಂದ ಬಳ್ಳಾರಿ ಜಿಲ್ಲೆಯ ಉಳಿದ ತಾಲೂಕಿನ ರೈತರಿಗೆ ತುಂಗಭದ್ರಾ ಜಲಾಶಯದ ಸಮರ್ಪಕ ನೀರು ದೊರಕದೆ ವಂಚಿತರಾಗಲಿದ್ದಾರೆ. ಒಂದು ಲಕ್ಷ ಆಕ್ಷೇಪಣೆಗಳನ್ನು ಸಲ್ಲಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಕಂಪ್ಲಿ ಘಟಕದ ಪದಾಧಿಕಾರಿಗಳಾದ ಪಿ.ಸತ್ಯನಾರಾಯಣ, ಎಂ.ನಾಗರಾಜ, ಟಿ.ಗಂಗಣ್ಣ, ಆದೋನಿ ರಂಗಪ್ಪ, ಕೊನಂಕಿ ಬಾಲಕೃಷ್ಣ, ಜ್ಯೋತಿ, ರಫಿಕ್, ಬಸವರಾಜ್, ಪೆದ್ದಣ್ಣ, ಬಳ್ಳಾರಿಯ ಚಾನಾಳ್ ಶೇಖರ್, ಸಿದ್ಮಲ್ ಮಂಜುನಾಥ, ಗಂಗಾವತಿ ವೀರೇಶ್, ದರೂರು ಟಿ.ರಂಜಾನ್ ಸಾಬ್, ಕೆ.ರಮೇಶ್, ಬಿ.ಜಗದೀಶಕುಮಾರ್, ಮೆಟ್ರಿ ಎರ‌್ರಿಸ್ವಾಮಿ, ಮುದ್ದಾಪುರ ಮಲ್ಲಿಕಾರ್ಜುನ ಇತರರಿದ್ದರು.