ಕಂಪ್ಲಿ ತಹಸೀಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿದರು. ಪ್ರಮುಖರಾದ ಡಿ.ಎ.ರುದ್ರಪ್ಪಾಚಾರ್, ಡಿ.ಮೌನೇಶ್, ಕಾಳಾಚಾರಿ, ಚಂದ್ರಶೇಖರಾಚಾರಿ, ಎಂ.ಮಂಜುನಾಥ ಇತರರಿದ್ದರು. 
ಜಿಲ್ಲೆ

ಸರಳ-ಅರ್ಥಪೂರ್ಣ ಜಯಂತಿ ಆಚರಿಸಿ

ಕಂಪ್ಲಿ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಜ.1ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಚರಿಸುವ ನಿಮಿತ್ತ ಸೋಮವಾರ ಇಲ್ಲಿನ ತಹಸೀಲ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ತಾಲೂಕು ಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, ಜ.1ರಂದು ಸರ್ಕಾರದ ಎಲ್ಲಾ ಕಚೇರಿ, ಶಾಲೆ ಕಾಲೇಜುಗಳಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಆಚರಿಸಬೇಕು. ವಿಶ್ವಕರ್ಮ ಸಮಾಜದ ಜಗದ್ಗುರು ಡಿ.ಹಿರೇಹಾಳಿನ ಶ್ರೀ ಕಾಳಹಸ್ತ್ಯೇಂದ್ರಮಹಾಸ್ವಾಮೀಜಿ ಅವರನ್ನು ಆಹ್ವಾನಿಸಬೇಕು. ಕನಿಷ್ಠ ಒಬ್ಬ ಶಿಲ್ಪಿಯನ್ನಾದರೂ ಗೌರವಿಸಬೇಕು ಎಂದರು.

ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿ, ತಹಸೀಲ್ ಸಭಾಂಗಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು. ತಾಪಂ ಇಒ ಆರ್.ಕೆ.ಶ್ರೀಕುಮಾರ್, ಗ್ರೇಡ್-2ತಹಸೀಲ್ದಾರ್ ಬಿ.ಆರ್.ಷಣ್ಮುಖ, ಶಿರಸ್ತೆದಾರ್ ಎಸ್.ಡಿ.ರಮೇಶ, ಪ್ರಮುಖರಾದ ಗುರುಮೂರ್ತಿ ಆಚಾರ್, ಎಂ.ಯಂಕಣ್ಣ, ಎಂ.ಮಂಜುನಾಥ, ಡಿ.ವಿಜಯಕುಮಾರ್, ಡಾ.ವೇದಮೂರ್ತಿ, ಮೆಟ್ರಿ ಷಣ್ಮುಖ, ಸೇರಿ ವಿಶ್ವಕರ್ಮ ಸಮಾಜದವರು, ತಾಲೂಕು ಮಟ್ಟದ ನಾನಾ ಅಧಿಕಾರಿಗಳಿದ್ದರು.