ಕಲಬುರಗಿಯ ಶ್ರೀ ಶರಣಬಸವಪ್ಪ ಅಪ್ಪ ಅವರಿಗೆ ಕಂಪ್ಲಿ ವೀರಶೈವ ಸಂಘದ ಆವರಣದಲ್ಲಿ ನುಡಿನಮನ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಎಚ್.ನಾಗರಾಜ, ಎಸ್.ಎಂ.ನಾಗರಾಜ, ವಾಲಿಕೊಟ್ರಪ್ಪ, ಕೆ.ಎಂ.ವಾಗೀಶ ಪಂಡಿತಾರಾಧ್ಯ, ಎಸ್.ಡಿ.ಬಸವರಾಜ, ಕೆ.ವಿರೂಪಾಕ್ಷಪ್ಪ, ಮಾಜಿ ಅಧ್ಯಕ್ಷ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಆಡಳಿತಾಧಿಕಾರಿ ಎಂ.ಚಂದ್ರಶೇಖರ, ಮುಖ್ಯಶಿಕ್ಷಕ ಆರ್.ಬಸವರಾಜ ಇತರರಿದ್ದರು. 
ಜಿಲ್ಲೆ

ಶ್ರೀ ಶರಣಬಸವಪ್ಪ ಅಪ್ಪರಿಂದ ಅಪಾರ ಸೇವೆ

ಕಂಪ್ಲಿ: ಕಲಬುರಗಿಯ ಡಾ.ಶರಣಬಸವಪ್ಪ ಅಪ್ಪ ಅವರಿಗೆ ಪಟ್ಟಣದ ತಾಲೂಕು ವೀರಶೈವ ಸಂಘದ ಆವರಣದಲ್ಲಿ ಶುಕ್ರವಾರ ನುಡಿನಮನ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಲ್ಲದೆ, ಧರ್ಮ ಜಾಗೃತಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರು ಅಸ್ತಂಗತರಾಗಿದ್ದು ಸಮಾಜಕ್ಕೆ ತುಂಬದ ನಷ್ಟವಾಗಿದೆ ಎಂದರು.