ಕಂಪ್ಲಿ: ಕಣಿವೆ ತಿಮ್ಲಾಪುರ ಗ್ರಾಮದ ಬುಕ್ಕಸಾಗರ ಮಾರ್ಗದಲ್ಲಿ ಗಾಣದ ಮೋರೆ ಬಳಿ ಡಂಗಿ ಲಿಂಗಪ್ಪನ ಗದ್ದೆಯಲ್ಲಿ, ಸಂಡೂರು ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ಮಂಗಳವಾರ ಶಿಲಾಶಾಸನ ಪತ್ತೆ ಹಚ್ಚಿದ್ದಾರೆ.
ಇದು ವಿಜಯನಗರ ಶ್ರೀಕೃಷ್ಣ ದೇವರಾಯನ ಕಾಲದ ಶಾಸನವಾಗಿದೆ. ಶಾಸನ ತೆಲುಗಿನಲ್ಲಿದ್ದು ಕನ್ನಡದಲ್ಲಿ ಬರೆದಿರುವುದು ವಿಶೇಷವಾಗಿದೆ. ಅಡ್ಡ ಗೆರೆಗಳನ್ನು ಕೊರೆದು ಅದರ ಮೇಲೆ ಅಕ್ಷರಗಳನ್ನು ಕೆತ್ತಲಾಗಿದೆ. ಶಾಸನದಲ್ಲಿ 18 ಸಾಲುಗಳಿದ್ದು, ಶಾಸನದ ಎಡ ಅಂಚಿನಲ್ಲಿ 2 ಸಾಲುಗಳಿವೆ. ಮೇಲ್ನೋಟಕ್ಕೆ ದಾನ ಶಾಸನವಾಗಿರುವ ಸಾಧ್ಯತೆಗಳಿವೆ ಎಂದು ತಳವಾರ ನರಸಿಂಹ ತಿಳಿಸಿದ್ದಾರೆ.