ಜಿಲ್ಲೆ

ಭವನದ ಮೂಲಸೌಕರ್ಯಕ್ಕೆ 5 ಲಕ್ಷ ರೂ.

ಕಂಪ್ಲಿ: ಬುಡಕಟ್ಟು ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆದು ಹುದ್ದೆಗಳನ್ನು ಅಲಂಕರಿಸಲಿ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದಲ್ಲಿ ಬುಡಕಟ್ಟು ಮೇದಾರ ಕೇತಯ್ಯ ಸಮಾಜದ ಸಮುದಾಯ ಭವನ ಉದ್ಘಾಟಿಸಿ ಬುಧವಾರ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಜಾಗೃತಿ ತೋರಬೇಕು. ಸಮುದಾಯದ ಭವನಕ್ಕೆ ಆವರಣ ಗೋಡೆ, ಶೌಚಗೃಹ ಮೂಲಸೌಕರ್ಯಗಳಿಗೆ ಪುರಸಭೆಯಿಂದ 5 ಲಕ್ಷ ರೂ. ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಬುಡಕಟ್ಟು ಮೇದಾರ ಕೇತಯ್ಯ ಸಂಘದ ಕಾರ್ಯದರ್ಶಿ ಎಂ.ಗಾಳಿಕುಮಾರ್ ಮಾತನಾಡಿ, 2023-24ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 4.52 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಮೇಲ್ಮಹಡಿ ಕಟ್ಟಡ ನಿರ್ಮಾಣಕ್ಕೆ ಶಾಸಕರು 10 ಲಕ್ಷ ರೂ. ಅನುದಾನ ಒದಗಿಸಬೇಕು. ಕೇತಯ್ಯ ಕಲ್ಯಾಣಮಂಟಪ ನಿರ್ಮಾಣಕ್ಕೆ ಅರ್ಧ ಎಕರೆ ಭೂಮಿ ಕೊಡುವಲ್ಲಿ ಪುರಸಭಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಎಂ.ವೆಂಕಟೇಶ, ಎಂ.ರಾಮಣ್ಣ, ಎಂ.ಶ್ರೀನಿವಾಸ, ಎಂ.ಶಿವಣ್ಣ, ಪುರಸಭೆ ಸದಸ್ಯರಾದ ಸಿ.ಆರ್.ಹನುಮಂತ, ಹೂಗಾರ ರಮೇಶ, ಪ್ರಮುಖರಾದ ಬಳೆ ಮಲ್ಲಿಕಾರ್ಜುನ, ಬಿ.ನಾರಾಯಣಪ್ಪ, ಜಿ.ಸುಧಾಕರ, ಡಿಶ್ ಪ್ರಸಾದ್, ಬಿ.ಬಸಪ್ಪ ಇತರರಿದ್ದರು.