ಛಲವಾದಿ ಮಹಾಸಭಾದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಎಂ.ಸಿ.ಮಾಯಪ್ಪ ಅವರನ್ನು ಗೌರವಿಸಲಾಯಿತು.  
ಜಿಲ್ಲೆ

ಪ್ರತಿ ತಾಲೂಕಿಗೊಂದು ಛಲವಾದಿ ಸಮುದಾಯ ಭವನ ನಿರ್ಮಾಣ

ಶಶಿಧರ ಎಲ್

ಕಂಪ್ಲಿ: ಪ್ರತಿ ತಾಲೂಕು ಕೇಂದ್ರಗಳಲ್ಲಿ ಛಲವಾದಿ ಸಮುದಾಯ ಭವನ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಛಲವಾದಿ ಮಹಾಸಭಾದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಎಂ.ಸಿ.ಮಾಯಪ್ಪ ಹೇಳಿದರು.

ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಒತ್ತಾಯ

ಪಟ್ಟಣದ ರಾಮಲಿಂಗಮ್ಮ ದೇವಸ್ಥಾನ ಆವರಣದಲ್ಲಿ ಗುರುವಾರ ಛಲವಾದಿ ಸಮುದಾಯದ ಸಂಘಟನಾ ಸಭೆಯಲ್ಲಿ ಮಾತನಾಡಿ, ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಛಲವಾದಿ ಸಮಾಜದವರಿಗೆ ಎಲ್ಲ ಪಕ್ಷಗಳು ಹೆಚ್ಚಿನ ಸ್ಥಾನಮಾನ ನೀಡುವಂತೆ ಒತ್ತಾಯಿಸಲಾಗುವುದು.

ಅಂಬೇಡ್ಕರ್ ವಿಚಾರಧಾರೆಗಳನ್ನು ಪ್ರತಿ ಮನೆಮನೆಗೂ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗುವುದು. ಸಮಾಜದ ಸಂಘಟನೆ, ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆ ಬಲಪಡಿಸಲು ಜಾಗೃತಿ ವಹಿಸಲಾಗುವುದು ಎಂದರು.

ಇದೇವೇಳೆ ಎಂ.ಸಿ.ಮಾಯಪ್ಪ ಅವರನ್ನು ಗೌರವಿಸಲಾಯಿತು. ಛಲವಾದಿ ಸಮಾಜದ ಪ್ರಮುಖರಾದ ಡಾ.ಎ.ಸಿ.ದಾನಪ್ಪ, ಬೆಳ್ಳಕ್ಕಿ ಹುಸೇನಪ್ಪ, ಅಂಗಜಾಲರ ಶಂಕ್ರಪ್ಪ, ಟಿ.ವಿರುಪಣ್ಣ, ಬಾವಿಕಟ್ಟೆ ಚನ್ನಬಸವ, ಮಾದನೂರು ಮಹೇಶ, ಮಾವಿನಹಳ್ಳಿ ಲಕ್ಷ್ಮಣ, ಟಿ.ರಾಜಪ್ಪ, ಎಂ.ಸಿ.ನಿಂಗಪ್ಪ, ಮಾರುತಿ, ಹುಸೇನಪ್ಪ, ಟಿ.ಸುರೇಶ್, ಮಾನವಿ ರಾಮಚಂದ್ರ, ಚನ್ನದಾಸರ ಸಂಘದ ಅಧ್ಯಕ್ಷ ಡಿ.ಲಕ್ಷ್ಮಣ ಇತರರಿದ್ದರು.