ಕಂಪ್ಲಿಯಲ್ಲಿ ಐತಿಹಾಸಿಕ ಶ್ರೀ ಸೋಮೇಶ್ವರ ದೇವರ ಗಂಗೆಸ್ಥಳ ಮೆರವಣಿಗೆ ಜರುಗಿತು. ಭಕ್ತರಾದ ಎಸ್.ಎಂ.ಶರಣಯ್ಯಸ್ವಾಮಿ, ಚೇತನ್‌ಕುಮಾರ್, ಕಿರಣ್, ಶಿವಮಣಿ, ಅಗ್ನಿ ಬಸವರಾಜ್ ಇತರರಿದ್ದರು. 
ಜಿಲ್ಲೆ

ಶ್ರೀ ಸೋಮೇಶ್ವರ ದೇವರ ಗಂಗೆಸ್ಥಳ ಮೆರವಣಿಗೆ

ಕಂಪ್ಲಿ: ಪಟ್ಟಣದಲ್ಲಿ ಐತಿಹಾಸಿಕ ಶ್ರೀ ಸೋಮೇಶ್ವರ ದೇವರ ಗಂಗೆಸ್ಥಳ ಮೆರವಣಿಗೆ ಭಾನುವಾರ ಜರುಗಿತು.

ತುಂಗಭದ್ರಾ ನದಿಯಿಂದ ಡೊಳ್ಳು ಕುಣಿತ, ಮಂಗಳವಾದ್ಯಗಳೊಂದಿಗೆ ಆರಂಭಗೊಂಡ ಗಂಗೆಸ್ಥಳ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಸಾಗಿ ದೇವಸ್ಥಾನ ಬಳಿ ಸಮಾವೇಶಗೊಂಡಿತು.

ಅರ್ಚಕರಾದ ಎಸ್.ಎಂ.ಸಂಗಮೇಶ್ವರಸ್ವಾಮಿ, ಸೋಮನಾಥ, ಮಹಾಂತೇಶ್ ಪೌರೋಹಿತ್ಯದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಜರುಗಿದವು.

ಭಕ್ತರಾದ ಟಿ.ಸೋಮನಾಥ, ಡಿ.ರವಿ, ಎ.ತಾಯಣ್ಣ, ಟಿ.ಶಂಕರಪ್ಪ, ಪರಶುರಾಮಪ್ಪ, ಮಧುರೆ ರಾಯನಗೌಡ, ಯರಿಸ್ವಾಮಿ, ಎಸ್.ಪರಮೇಶಪ್ಪ ಇತರರಿದ್ದರು.