ಕಂಪ್ಲಿ ಶ್ರೀಪೇಟೆ ಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಶಿವಮಾಲಾಧಾರಿಗ ಶಿವಪೂಜೆ ಜರುಗಿತು.  
ಜಿಲ್ಲೆ

ಶಿವಮಾಲಾಧಾರಿಗಳ ಶಿವಪೂಜೆ ಸಂಪನ್ನ

ಕಂಪ್ಲಿ: ಇಲ್ಲಿನ ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಶಿವಮಾಲಾಧಾರಿಗಳ ಶಿವಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಗಳಿಂದ ಜರುಗಿತು. ಪ್ರಧಾನ ಅರ್ಚಕ ಸಿದ್ಧರಾಮೇಶ್ವರಸ್ವಾಮಿ, ಕೆ.ಎಂ.ಚಂದ್ರಶೇಖರಸ್ವಾಮಿ ಪೌರೋಹಿತ್ಯದಲ್ಲಿ ರುದ್ರಾಭಿಷೇಕ, ಸಹಸ್ರನಾಮಾವಳಿ, ಶಿವಭಜನೆ, ಮಹಾಮಂಗಳಾರತಿ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸದ್ಭಕ್ತರಾದ ವಿಜಯಲಕ್ಷ್ಮೀ, ಐಶ್ವರ್ಯ, ಗುರುಸ್ವಾಮಿಗಳಾದ ಜಡೆಯ್ಯಸ್ವಾಮಿ, ಗೌಳೇರು ಪಂಪಾಪತಿ, ಜಟಾಧರ ಶಿವ, ಎಸ್.ಎಂ.ಸಂಗಮೇಶ್ವರಸ್ವಾಮಿ, ದೇವಸ್ಥಾನ ಆಡಳಿತ ಮಂಡಳಿಯವರು, ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು. ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಕಂಪ್ಲಿ, ಗಂಗಾವತಿ, ಚಿಕ್ಕಜಂತಕಲ್ ಶಿವಮಾಲಾಧಾರಿಗಳು ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆ ಬೆಳೆಸಿದರು.