ಜಿಲ್ಲೆ

ದ್ವಿತೀಯ ಪಿಯು ಪರೀಕ್ಷೆಗೆ ಸಕಲ ಸಿದ್ಧತೆ

ಕುರುವತ್ತಿ ಶ್ರೀಕಾಂತಪ್ಪ

ಕಂಪ್ಲಿ: ದ್ವಿತೀಯ ಪಿಯು ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಇಲ್ಲಿನ ಪರೀಕ್ಷಾ ಮುಖ್ಯ ಅಧೀಕ್ಷಕ ಎಚ್.ಚಂದ್ರಶೇಖರ್ ತಿಳಿಸಿದರು.

ಸ್ಥಳೀಯ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಮತ್ತು ಪೂರಕ ಕೇಂದ್ರವಾಗಿ ಜೆವಿಸಿ ಪಿಯು ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 870 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ತಾಲೂಕಿನ ಮೂರು ಸರ್ಕಾರಿ ಪಿಯು ಕಾಲೇಜು ಸೇರಿ ಒಟ್ಟು ಆರು ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕನ್ನಡ ಪರೀಕ್ಷೆ 816, ಗಣಿತ, ಶಿಕ್ಷಣಶಾಸ್ತ್ರ 153, ಅರ್ಥಶಾಸ್ತ್ರ 726, ರಸಾಯನಶಾಸ್ತ್ರ 90, ವ್ಯವಹಾರ ಅಧ್ಯಯನ 231, ಭೂಗೋಳ, ಜೀವಶಾಸ್ತ್ರ 90, ಭೌತಶಾಸ್ತ್ರ, ಇತಿಹಾಸ 764, ಇಂಗ್ಲಿಷ್ 865, ರಾಜ್ಯಶಾಸ್ತ್ರ 431, ಲೆಕ್ಕಶಾಸ್ತ್ರ 230, ಗಣಕ ವಿಜ್ಞಾನ, ಸಮಾಜಶಾಸ್ತ್ರ 481ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 29 ಕೊಠಡಿ ಸಿದ್ಧಪಡಿಸಲಾಗಿದೆ. ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಉತ್ತರ ಪತ್ರಿಕೆ ಪಾಲಕರಾಗಿ ಸತ್ಯನಾರಾಯಣರಾವ್, ಬ್ಲಾಕ್ ಸೂಪರ್‌ಇನ್‌ಟೆಂಡೆಂಟ್ ಆಗಿ ನಾಗಮಲ್ಲೇಶ್ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.