ಕಂಪ್ಲಿ ತಹಸಿಲ್ ಕಚೇರಿಯಲ್ಲಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿದರು. ಪ್ರಮುಖರಾದ ಆರ್.ಕೆ.ಶ್ರೀಕುಮಾರ್, ಕೆ.ದುರುಗಣ್ಣ, ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ ಇತರರಿದ್ದರು. 
ಜಿಲ್ಲೆ

ಸಡಗರದಿಂದ ಕಕ ಉತ್ಸವ ಆಚರಿಸಲು ನಿರ್ಧಾರ

ನರೇಶ್ ಕುಮಾರ್

ಕಂಪ್ಲಿ: ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ಉತ್ಸವದ ಪೂರ್ವಭಾವಿ ಸಭೆ ನಡೆಯಿತು.

ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿ, ಸೆ.17ರಂದು ಬೆಳಗ್ಗೆ 8ಗಂಟೆಗೆ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗುವುದು. ಶಾಲೆ ಮಕ್ಕಳಿಂದ ನಾಡಗೀತೆ, ರೈತಗೀತೆ ಹಾಡಿಸಲಾಗುವುದು. ಕಲ್ಯಾಣ ಕರ್ನಾಟಕ ಉತ್ಸವವನ್ನು ಅರ್ಥಪೂರ್ಣವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ತಿಳಿಸಿದರು.

ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಶಿರಸ್ತೇದಾರ್ ಎಸ್.ಡಿ.ರಮೇಶ, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಬಿ.ಅಂಬಣ್ಣ, ಅರವಿ ಬಸವನಗೌಡ, ಯುಗಂಧರನಾಯ್ಡು, ಬುರೆ ವಿರೂಪಾಕ್ಷಿ, ಷಣ್ಮುಖಪ್ಪ ಚಿತ್ರಗಾರ್, ಎಚ್.ಶ್ರೀನಿವಾಸ, ಜುಚನಿ ಶಿವಕುಮಾರ್, ಅಧಿಕಾರಿಗಳಾದ ಟಿ.ಎಂ.ಬಸವರಾಜ, ಜಿ.ವೀರೇಶ, ಪ್ರಕಾಶಬಾಬು, ಬಿ.ಶಿವಕುಮಾರ್, ಎಎಸ್‌ಐ ಬಸವರಾಜ, ಪಿ.ಬಸವರಾಜ, ಸರೋಜಾ ಮಾಳಿ, ಕೆ.ವಿರೂಪಾಕ್ಷಿ, ಮಲ್ಲಪ್ಪ ಇತರರಿದ್ದರು.