ಕಂಪ್ಲಿಯಲ್ಲಿ ಎಸ್ಸಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ಪ್ರಮುಖರಾದ ವೀರಾಂಜನೇಯಲು, ಭಟ್ಟ ಪ್ರಸಾದ್, ಕೆ.ಎಸ್.ಚಾಂದ್‌ಬಾಷಾ, ಲಡ್ಡು ಹೊನ್ನೂರವಲಿ ಇತರರಿದ್ದರು. 
ಜಿಲ್ಲೆ

ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ

ನರೇಶ್ ಕುಮಾರ್

ಕಂಪ್ಲಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ಮೊದಲ ಆದ್ಯತೆ ನೀಡಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಇಲ್ಲಿನ ಎಂ.ಡಿ.ಕ್ಯಾಂಪ್ ಬಳಿ 6.50 ಕೋಟಿ ರೂ. ವೆಚ್ಚದಲ್ಲಿ ಎಸ್ಸಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ, 68 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಕಾಪಾಡಲು ನಾನಾ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನ ಒದಗಿಸಲಾಗಿದೆ ಎಂದರು. ಪುರಸಭೆ ಸದಸ್ಯರಾದ ವೀರಾಂಜನೇಯಲು, ಭಟ್ಟ ಪ್ರಸಾದ್, ಕೆ.ಎಸ್.ಚಾಂದ್‌ಬಾಷಾ, ಲಡ್ಡು ಹೊನ್ನೂರವಲಿ, ಪ್ರಮುಖರಾದ ಕೆ.ಶ್ರೀನಿವಾಸ ರಾವ್, ಡಾ.ಎ.ಸಿ.ದಾನಪ್ಪ, ಎಂ.ಸುಧೀರ್, ಪ್ರಸಾದ್, ಎಲ್.ರಾಮನಾಯ್ಡು, ಎಂ.ಗೋಪಾಲ್, ಆದಿಶೇಷ, ಹನುಮಂತಪ್ಪ ಇತರರಿದ್ದರು.