ಕಂಪ್ಲಿ ತುಂಗಭದ್ರಾ ನದಿ ಸೇತುವೆ ಮೇಲೆ ಆರಂಭಗೊಂಡ ಬಸ್‌ಗಳ ಸಂಚಾರ. 
ಜಿಲ್ಲೆ

ಕಂಪ್ಲಿ ಸೇತುವೆ ಮೇಲೆ ಬಸ್ ಸಂಚಾರ ಆರಂಭ

ನರೇಶ್ ಕುಮಾರ್

ಕಂಪ್ಲಿ: ತುಂಗಭದ್ರಾ ನದಿ ಸೇತುವೆ ಮೇಲೆ ಬಸ್, ಲಘು ವಾಹನಗಳ ಓಡಾಟ ಸೋಮವಾರ ಆರಂಭವಾಗಿದೆ.

ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದ ಕಾರಣ 33 ದಿನಗಳಿಂಧ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ಬಸ್ ಸಂಚಾರ ಪುನರಾರಂಭದಿಂದ ವಿದ್ಯಾರ್ಥಿಗಳು, ಕೃಷಿಕರು, ವೈದ್ಯಕೀಯ ಚಿಕಿತ್ಸೆಗೆ ತೆರಳುವ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಹೊಸಪೇಟೆ, ಗಂಗಾವತಿಯಿಂದ ಕಂಪ್ಲಿ ಮೂಲಕ ಸಂಚರಿಸುವ ಎಲ್ಲ ಡಿಪೋಗಳ ಬಸ್‌ಗಳು ರಾತ್ರಿ ವೇಳೆ ಬಂದು ಹೋಗಬೇಕಿವೆ. ಕಂಪ್ಲಿ ಮೂಲಕ ಬಳ್ಳಾರಿ, ಹೊಸಪೇಟೆ, ಗಂಗಾವತಿ ಕಡೆಗೆ ಒಟ್ಟಾರೆ 344 ಬಸ್‌ಗಳ ಸಂಚರಿಸುತ್ತವೆ.