ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್ ಎಸ್.ಶಿವರಾಜ, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪಿಐ ಕೆ.ಬಿ.ವಾಸುಕುಮಾರ್ ಇತರರಿದ್ದರು. 
ಜಿಲ್ಲೆ

ಅಧಿಕಾರಿಗಳು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಿ

ನರೇಶ್ ಕುಮಾರ್

ಕಂಪ್ಲಿ: ಸ್ವಾತಂತ್ರೊೃೀತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಅಧಿಕಾರಿಗಳು ಸಿದ್ಧತೆ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಎಸ್.ಶಿವರಾಜ ಹೇಳಿದರು.

ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 7.15ಕ್ಕೆ ಧ್ವಜಾರೋಹಣ ನೆರವೇರಿಸಬೇಕು. ಬೆಳಗ್ಗೆ 9ಗಂಟೆಗೆ ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗುವುದು.

ಪೊಲೀಸ್, ಗೃಹರಕ್ಷಕ ದಳದಿಂದ ಧ್ವಜವಂದನೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಶಿಕ್ಷಣ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮ, ಪುರಸಭೆ ಮೈದಾನ ಸ್ವಚ್ಛತೆ, ಧ್ವಜಸ್ತಂಭ ನಿರ್ವಹಣೆ, ಕುಡಿವ ನೀರು, ವೇದಿಕೆ ಸಿದ್ಧತೆ ಮಾಡಲಿದೆ. ಪೊಲೀಸ್ ಇಲಾಖೆ ಪಥಸಂಚಲನ, ಬಿಗಿ ಬಂದೋಬಸ್ತ್, ವಾಹನ ಸಿದ್ಧತೆ ನೋಡಿಕೊಳ್ಳಲಿದೆ.

ಆರೋಗ್ಯ ಇಲಾಖೆ ಆಂಬುಲೆನ್ಸ್‌ನೊಂದಿಗೆ ತಕ್ಕ ಸಿದ್ಧತೆ, ಜೆಸ್ಕಾಂ ಪಟ್ಟಣದ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ವ್ಯವಸ್ಥೆ ನಿರ್ವಹಿಸಲಿದೆ. ಎಲ್ಲ ಅಧಿಕಾರಿಗಳು ಸಮನ್ವಯ ಸಾಧಿಸಿ ಅಚ್ಚುಕಟ್ಟಾಗಿ, ಯಾವುದೇ ಅವಘಡಗಳಿಗೆ ಆಸ್ಪದ ನೀಡದೆ ಸ್ವಾತಂತ್ರ್ಯೋತ್ಸವ ಆಚರಿಸಬೇಕು ಎಂದು ಸೂಚಿಸಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪಿಐ ಕೆ.ಬಿ.ವಾಸುಕುಮಾರ್, ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ಪ್ರಮುಖರಾದ ಡಾ.ಎ.ಸಿ.ದಾನಪ್ಪ, ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಷಣ್ಮುಖಪ್ಪ ಚಿತ್ರಗಾರ, ಬಿ.ಹುಸೇನ್‌ಸಾಬ್, ಬಿ.ಅಂಬಣ್ಣ, ಬಿ.ಜಾಫರ್, ಬಿ.ವಿ.ಗೌಡ, ಬಳೆ ಮಲ್ಲಿಕಾರ್ಜುನ, ಪ್ರಕಾಶ ಖಂಡೇಲವಾಲ್, ಕೆ.ರಮೇಶ, ವಿ.ಬಿ.ನಾಗರಾಜ ಇತರರಿದ್ದರು.