ಜಿಲ್ಲೆ

ಮೊಸಳೆ ದಾಳಿಗೆ ಸಿಲುಕಿ ಬಚಾವ್ ಆದ ಬಾಲಕ

ಕಂಪ್ಲಿ: ತಾಲೂಕಿನ ನಂ.3 ಸಣಾಪುರ ಗ್ರಾಮದ ಬಳಿ ಮಂಗಳವಾರ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಬಾಲಕನಿಗೆ ಮೊಸಳೆ ಕಚ್ಚಿದ್ದು, ಬಾಲಕನ ತೋಳಿಗೆ ಗಾಯವಾಗಿದೆ.

ಗ್ರಾಮದ ವೇದಮೂರ್ತಿ(16) ಗಾಯಾಳು. ಮೊಸಳೆ ಕೈಗೆ ಕಚ್ಚಿದಾಗ ವೇದಮೂರ್ತಿ ಕಿರುಚಾಡಿದ್ದು, ದಡದಲ್ಲಿದ್ದ ವೀರೇಶ್ ಎಂಬುವವರು ಮೊಸಳೆಗೆ ಕಲ್ಲೆಸೆದಿದ್ದಾರೆ. ಇದರಿಂದಾಗಿ ಮೊಸಳೆ ಬಾಲಕನನ್ನು ಬಿಟ್ಟು ಹೋಗಿದೆ. ಬಾಲಕನಿಗೆ ಕಂಪ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.