ಕಂಪ್ಲಿಯ ಬಿಸಿಎಂ ಹಾಸ್ಟೆಲ್ ಪಕ್ಕ ಮದ್ಯದಂಗಡಿ ಆರಂಭಿಸಲು ಅನುಮತಿ ಕೊಡಬಾರದು ಎಂದು ಶಿರಸ್ತೆದಾರ್ ಜಿ.ಪಂಪಾಪತಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಕೆ.ಹೊನ್ನೂರಪ್ಪ ಮಂಗಳವಾರ ಮನವಿ ಸಲ್ಲಿಸಿದರು.  
ಜಿಲ್ಲೆ

ಹಾಸ್ಟೆಲ್ ಪಕ್ಕ ಮದ್ಯದಂಗಡಿ ಸಲ್ಲ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯ

ಕಂಪ್ಲಿ: ಇಲ್ಲಿನ ಬಳ್ಳಾರಿ ರಸ್ತೆಯಲ್ಲಿನ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಪಕ್ಕದ ಮಳಿಗೆಯಲ್ಲಿ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಆರಂಭಿಸಲು ಅನುಮತಿ ಕೊಡಬಾರದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಮಹಾತ್ಮ ಜ್ಯೋತಿಬಾ ಫುಲೆ ವಾದ) ತಾಲೂಕು ಅಧ್ಯಕ್ಷ ಕೆ.ಹೊನ್ನೂರಪ್ಪ ಒತ್ತಾಯಿಸಿದರು.

ಶಿರಸ್ತೇದಾರ್ ಜಿ.ಪಂಪಾಪತಿಗೆ ಮಂಗಳವಾರ ಮನವಿ ಸಲ್ಲಿಸಿದರು. ಬಿಸಿಎಂ ಹಾಸ್ಟೆಲ್‌ಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಫ್ಯಾಕ್ಟರಿ ರಸ್ತೆಯ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಊಟ, ಉಪಾಹಾರ, ವಸತಿ ಸೌಲಭ್ಯ ಇಲ್ಲಿದೆ. ಆದರೆ, ಬೇರೆಡೆ ಇರುವ ಮದ್ಯದಂಗಡಿಯೊಂದನ್ನು ಹಾಸ್ಟೆಲ್ ಪಕ್ಕದ ವರ್ಗಾಯಿಸಲಾಗುತ್ತಿದೆ. ಇದರಿಂದ ಹಾಸ್ಟೇಲ್‌ನಲ್ಲಿನ ವಿದ್ಯಾರ್ಥಿಗಳ ಮೇಲೆ ಇದು ಋಣಾತ್ಮಕ ಪರಿಣಾಮ ಬೀರಲಿದೆ. ಆದ್ದರಿಂದ ಇಲ್ಲಿ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಆರಂಭಿಸಲು ಅನುಮತಿ ಕೊಡಬಾರದು. ಹಾಸ್ಟೆಲ್ ಅಧೀಕ್ಷಕರು ಈಗಾಗಲೇ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.