ಕಂಪ್ಲಿ ಪುರಸಭೆ ಅಧ್ಯಕ್ಷರಾಗಿ ಭಟ್ಟ ಪ್ರಸಾದ್, ಉಪಾಧ್ಯಕ್ಷರಾಗಿ ಸುಶೀಲಮ್ಮ ಆಯ್ಕೆಗೊಂಡರು. ಸಂಸದ ಈ.ತುಕರಾಮ, ಶಾಸಕ ಜೆ.ಎನ್.ಗಣೇಶ್, ಪ್ರಮುಖರಾದ ಎಂ.ಸುಧೀರ್, ಬಿ.ಹುಸೇನ್‌ಸಾಬ್, ಬಿ.ಜಾಫರ್ ಸೇರಿ ಪುರಸಭೆ ಕಾಂಗ್ರೆಸ್ ಸದಸ್ಯರಿದ್ದರು. 
ಜಿಲ್ಲೆ

ಮುದುಡಿದ ಕಮಲ ಕಾಂಗ್ರೆಸ್ ಮೇಲುಗೈ

ಕಂಪ್ಲಿ: ಶಾಸಕ ಮತ್ತು ಸಂಸದರ ಮತದೊಂದಿಗೆ ಕಾಂಗ್ರೆಸ್ ಪಟ್ಟಣದ ಪುರಸಭೆ ಅಧಿಕಾರದ ಗದ್ದುಗೆ ಪಡೆಯಿತು. ಗುರುವಾರ ನಡೆದ ಚುನಾವಣೆಯಲ್ಲಿ ಪುರಸಭೆ ಅಧ್ಯಕ್ಷರಾಗಿ ಭಟ್ಟ ಪ್ರಸಾದ್, ಉಪಾಧ್ಯಕ್ಷೆಯಾಗಿ ಸುಶೀಲಮ್ಮ ಎರಡು ಮತಗಳ ಅಂತರದಿಂದ ಆಯ್ಕೆಗೊಂಡರು.

ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷೆ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಭಟ್ಟ ಪ್ರಸಾದ್, ಬಿಜೆಪಿಯಿಂದ ಟಿ.ವಿ.ಸುದರ್ಶನರೆಡ್ಡಿ, ಉಪಾಧ್ಯಕ್ಷೆ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸುಶೀಲಮ್ಮ, ಬಿಜೆಪಿಯಿಂದ ಹೇಮಾವತಿ ನಾಮಪತ್ರ ಸಲ್ಲಿಸಿದ್ದರು.

ಒಟ್ಟು 23 ಸದಸ್ಯರ ಪೈಕಿ 20 ಸದಸ್ಯರು ಹಾಜರಾಗಿದ್ದರು. ಬಿಜೆಪಿ 13 ಸದಸ್ಯ ಬಲ ಹೊಂದಿದ್ದು ಮೂವರು ಸದಸ್ಯರಾದ ಕೆ.ನಿರ್ಮಲ, ಪಾರ್ವತಿ, ಗಂಗಮ್ಮ ಉಡೇಗೋಳ್ ಗೈರಾಗಿದ್ದರು. 10 ಸ್ಥಾನ ಹೊಂದಿರುವ ಕಾಂಗ್ರೆಸ್ ಸಂಸದ ಈ.ತುಕಾರಾಮ್ ಹಾಗೂ ಶಾಸಕ ಜೆ.ಎನ್.ಗಣೇಶ ಮತ ಪಡೆದು ಎರಡು ಮತಗಳ ಅಂತರದಿಂದ ಅಧಿಕಾರದ ಗದ್ದುಗೆ ಪಡೆಯಿತು. ಬಹುಮತ ಇದ್ದರೂ ಬಿಜೆಪಿ ಅಧಿಕಾರ ಕಳೆದುಕೊಂಡಿತು. ತಹಸೀಲ್ದಾರ್ ಎಸ್.ಶಿವರಾಜ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಸದಸ್ಯರಾದ ವಿ.ಎಲ್.ಬಾಬು, ನಾಗಮ್ಮ, ಚಾಂದ್ ಬಾಷಾ, ಜಿ.ಸುಮ, ತಿಮ್ಮಕ್ಕ, ಮೌಲಾ, ಗುಡದಮ್ಮ, ಎಂ.ಹೊನ್ನೂರ್ ವಲಿ, ಶಾಂತಲಾ ವಿದ್ಯಾಧರ, ವೀರಾಂಜನೇಯಲು, ಎಸ್.ಎಂ.ನಾಗರಾಜ, ಸಿ.ಆರ್.ದೊಡ್ಡಹನುಮಂತ, ಎಂ.ಉಸ್ಮಾನ್, ಎನ್.ರಾಮಾಂಜಿನೇಯಲು, ಆರ್.ಆಂಜನೇಯ, ರಮೇಶ್ ಹೂಗಾರ ಹಾಜರಿದ್ದರು. ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಹಾಗೂ ಇತರ ಅಧಿಕಾರಿಗಳಿದ್ದರು. ಕಾಂಗ್ರೆಸ್ ಕಾರ್ಯರ್ಕರು ಅಧ್ಯಕ್ಷ ಭಟ್ಟ ಪ್ರಸಾದ್, ಉಪಾಧ್ಯಕ್ಷೆ ಸುಶೀಲಮ್ಮ ಅವರನ್ನು ಸನ್ಮಾನಿಸಿ ಮೆರವಣಿಗೆ ನಡೆಸಿದರು.