ನಿವೇಶನ-ವಸತಿ ಸೌಲಭ್ಯ ಕಲ್ಪಿಸುವಂತೆ ಕಂಪ್ಲಿಯ ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಉಸ್ಮಾನ್, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನಗೆ ತೃತೀಯಲಿಂಗಿಗಳು ಮನವಿ ಸಲ್ಲಿಸಿದರು. ರಾಜಮ್ಮ, ಮಂಜುಳಾ, ಮಮತಾ, ಖಾಸಿಂಬೀ, ದೀಕ್ಷಾ ಇತರರಿದ್ದರು. 
ಜಿಲ್ಲೆ

ತೃತೀಯಲಿಂಗಿಗಳಿಗೆ ನಿವೇಶನ-ವಸತಿ ಕಲ್ಪಿಸಿ

ಕಂಪ್ಲಿ: ನಮಗೆ ನಿವೇಶನ, ವಸತಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನಗೆ ತೃತೀಯಲಿಂಗಿಗಳು ಸೋಮವಾರ ಮನವಿ ಸಲ್ಲಿಸಿದರು.

ತೃತೀಯಲಿಂಗಿ ರಾಜಮ್ಮ ಮಾತನಾಡಿ, ಪಟ್ಟಣದಲ್ಲಿ 25ಕ್ಕೂ ಹೆಚ್ಚು ತೃತೀಯಲಿಂಗಿಗಳು ವಾಸವಿದ್ದೇವೆ. ಸಮಾಜದಲ್ಲಿ ನಮಗೆ ಕೆಲಸ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಬಡತನ ಕಾರಣದಿಂದಾಗಿ ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದೇವೆ.

ಕಡು ಬಡತನದಲ್ಲಿರುವ ನಮಗೆ ಸೂರಿನ ವ್ಯವಸ್ಥೆಯಿಲ್ಲ. ಸಮೀಕ್ಷೆ ಮಾಡಿ ವಸತಿ, ನಿವೇಶನ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಜಿ.ಸುಧಾಕರ್, ಆಟೋ ರಾಘವೇಂದ್ರ, ತೃತೀಯಲಿಂಗಿಗಳಾದ ಮಂಜುಳಾ, ಮಮತಾ, ಖಾಸಿಂಬೀ, ದೀಕ್ಷಾ, ಸರಸ್ವತಿ, ಹುಲಿಗೆಮ್ಮ, ದುರ್ಗಮ್ಮ, ಅಶ್ವಿನಿ, ಶಂಕ್ರಮ್ಮ ಇತರರಿದ್ದರು.