ಕಂಪ್ಲಿ: ಇಲ್ಲಿನ ಎಂ.ಡಿ.ಕ್ಯಾಂಪಿನಲ್ಲಿ ಮೊಹರಂ ನಿಮಿತ್ತ ಪೀರಲು ದೇವರು ಪ್ರತಿಸ್ಠಾಪಿಸುವ ಇಮಾಮ್‌ಕಾಸಿಂ ಆಶೀರ್‌ಖಾನೆ ಕಟ್ಟಡ ಗುರುವಾರ ಉದ್ಘಾಟನೆಗೊಂಡಿತು. ಮುಸ್ಲಿಂ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂ ಸಾಹೇಬ್ ಸಜ್ಜಾದೆ ನಶೀನ್ ದಿವಾನಖಾನೆ ಮಾತನಾಡಿ, ಎಲ್ಲರೂ ಪ್ರೀತಿ, ವಿಶ್ವಾಸ ಹಾಗೂ ಭಾವೈಕ್ಯದಿಂದ ಜೀವಿಸಬೇಕು. ಹಬ್ಬಗಳನ್ನು ಎಲ್ಲರೂ ಸೇರಿ ಸಂತೋಷದಿಂದ ಆಚರಿಸಬೇಕು ಎಂದರು.
ಶಾಸಕ ಜೆ.ಎನ್.ಗಣೇಶ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಪುರಸಭೆ ಸದಸ್ಯ ಆರ್.ಆಂಜನೇಯ, ಭಟ್ಟ ಪ್ರಸಾದ್, ಪ್ರಮುಖರಾದ ಆರ್.ಏಸಣ್ಣ, ಕೆ.ಹೊನ್ನೂರಪ್ಪ, ಮೊಹಿದ್ದೀನ್ ರಾಣಾ, ಆರ್.ಈರಣ್ಣ, ಗೋಪಿನಾಥ, ಫ್ರಾನ್ಸೀಸ್, ಎನ್.ಬುಜ್ಜಿಕುಮಾರ್, ರಾಜಾ, ಆರ್.ನರಸಪ್ಪ, ಪ್ರಸಾದ್, ಡಾ.ಮಲ್ಲೇಶ ಇತರರಿದ್ದರು.