ಮೆಟ್ರಿಯಲ್ಲಿ ಟೈಲರಿಂಗ್ ತರಬೇತಿ ಕಾರ್ಯಕ್ರಮಕ್ಕೆ ಗ್ರಾಪಂ ಸದಸ್ಯೆ ಕರಿಬಸಮ್ಮ ಚಾಲನೆ ನೀಡಿದರು. ಪ್ರಮುಖರಾದ ರೇಖಾ, ಶಿವನೇಗೌಡರ ರಾಮಪ್ಪ, ಶ್ರೀಶೈಲ, ಸರೋಜಮ್ಮ, ನಾಗವೇಣಿ ಇತರರಿದ್ದರು. 
ಜಿಲ್ಲೆ

ಟೈಲರಿಂಗ್‌ನಿಂದ ಸ್ವಾವಲಂಬಿ ಬದುಕು

ಶ್ರೀನಾಥ

ಕಂಪ್ಲಿ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಟೈಲರಿಂಗನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸಮನ್ವಯ ಅಧಿಕಾರಿ ರೇಖಾ ತಿಳಿಸಿದರು.

ಮೆಟ್ರಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ನವಚೇತನ ಜ್ಞಾನವಿಕಾಸ ಕೇಂದ್ರದಲ್ಲಿ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಟೈಲರಿಂಗ್ ಕಲಿಕೆಯಿಂದ ಸ್ವಯಂ ಉದ್ಯೋಗ ಮಾಡಬಹುದು ಎಂದರು.

ಸಂಪನ್ಮೂಲ ವ್ಯಕ್ತಿ ಶಿವನೇಗೌಡರ ರಾಮಪ್ಪ ಮಹಿಳೆಯರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಗ್ರಾಪಂ ಸದಸ್ಯೆ ಕರಿಬಸಮ್ಮ, ಆಂತರಿಕ ಲೆಕ್ಕ ಪರಿಶೋಧನಾಧಿಕಾರಿ ಶ್ರೀಶೈಲ, ಮೇಲ್ವಿಚಾರಕ ಅವಿನಾಶ್, ಒಕ್ಕೂಟದ ಅಧ್ಯಕ್ಷೆ ಸರೋಜಮ್ಮ, ಟೈಲರಿಂಗ್ ಶಿಕ್ಷಕಿ ನಾಗವೇಣಿ, ಸೇವಾ ಪ್ರತಿನಿಧಿಗಳಾದ ಗಾಳೆಮ್ಮ, ಭುವನಶ್ರೀ ಇತರರಿದ್ದರು.