ಕಂಪ್ಲಿಯಲ್ಲಿ ಗಾಂಧೀಜಿ ಜಯಂತ್ಯುತ್ಸವ ನಿಮಿತ್ತ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಭಾಗವಹಿಸಿದ್ದರು. ತೀರ್ಪುಗಾರರಾದ ಕೆ.ರಾಮಚಂದ್ರರಾವ್, ಕೋರಿ ಬಸವರಾಜ ಇದ್ದರು. 
ಜಿಲ್ಲೆ

ಸ್ಪರ್ಧೆಯಲ್ಲಿ 22 ವಿದ್ಯಾರ್ಥಿಗಳು ಭಾಗಿ

ಕಂಪ್ಲಿ: ಮಹಾತ್ಮ ಗಾಂಧೀಜಿ 155ನೇ ಜಯಂತ್ಯುತ್ಸವ ಅಂಗವಾಗಿ ಇಲ್ಲಿನ ಬಾಲಕಿಯರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಬುಧವಾರ ನಡೆಯಿತು.

ಸಿಆರ್‌ಪಿ ಎಸ್.ಈರೇಶ್ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ಗಾಂಧೀಜಿ ಅವರ ವಿಚಾರದಲ್ಲಿ ಸತ್ಯಾಗ್ರಹ, ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ, ಗಾಂಧೀಜಿ ಅವರ ತತ್ವಗಳಿಂದ ದೇಶ ಕಟ್ಟುವ ಬಗೆ ಕುರಿತು ಈಗಾಗಲೇ ಶಾಲಾ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಿ ಪ್ರಥಮ, ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗಾಗಿ ಇದೀಗ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ. ಇಂದು 11 ಶಾಲೆಗಳ 22 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಆಯ್ಕೆಯಾದ ಪ್ರಥಮ, ದ್ವಿತೀಯ ಸ್ಥಾನಗಳಿಸಿದ ಮಕ್ಕಳು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಗೆ ಆಯ್ಕೆಗೊಳ್ಳಲಿದ್ದಾರೆ ಎಂದರು.

ತೀರ್ಪುಗಾರ ದೇವಸಮುದ್ರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕೆ.ರಾಮಚಂದ್ರರಾವ್ ಮಾತನಾಡಿ, ಕನ್ನಡ ಭಾಷೆಯ ಪ್ರಬಂಧದಲ್ಲಿ ದೇವಸಮುದ್ರದ ಗಾದಿಲಿಂಗಮ್ಮ (ಪ್ರಥಮ), ಕಂಪ್ಲಿಯ ಸಾಯಿಚೇತನ (ದ್ವಿತೀಯ), ಸುಗ್ಗೇನಹಳ್ಳಿಯ ಯು.ದೀಪಿಕಾ (ತೃತೀಯ), ಚಿಕ್ಕಒಯಿಗನೂರಿನ ಎ.ಕೆ.ಇಂದ್ರಮ್ಮ (ಸಮಾಧಾನಕರ), ಆಂಗ್ಲಭಾಷೆಯ ಪ್ರಬಂಧದಲ್ಲಿ ಕಂಪ್ಲಿಯ ಪಿ.ವಿಮಲ (ಪ್ರಥಮ), ಜೆ.ಸಹನಾ (ದ್ವಿತೀಯ) ಸ್ಥಾನಗಳಲ್ಲಿ ಆಯ್ಕೆಗೊಂಡಿದ್ದಾರೆ ಎಂದರು.
ತೀರ್ಪುಗಾರ ಕಂಪ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕೋರಿ ಬಸವರಾಜ, ಇಸಿಒಗಳಾದ ಜಿ.ವೀರೇಶ, ಎಂ.ರೇವಣ್ಣ, ಮುಖ್ಯಶಿಕ್ಷಕರಾದ ಪ್ರಕಾಶ ಗುಂಡಳ್ಳಿ, ನಾಗರಾಜ ಸುಗ್ಗೇನಹಳ್ಳಿ, ಶಿಕ್ಷಕರಾದ ರೋಷನ್ ಜಮೀರ್, ಚಿಕ್ಕಜಾಯಿಗನೂರು ಪ್ರೌಢಶಾಲೆ ಎಸ್‌ಡಿಎ ಪ್ರಿಯಾಂಕ ಇತರರಿದ್ದರು.