ಕಂಪ್ಲಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಶಿಕ್ಷಕರಿಗೆ ಕರಪತ್ರ, ದಿನದರ್ಶಿಕೆಗಳನ್ನು ಉಚಿತವಾಗಿ ವಿತರಿಸಲಾಯಿತು. ಪ್ರಮುಖರಾದ ಅಚ್ಚಪ್ಪ ಶರಣಪ್ಪ, ವೆಂಕಟಸ್ವಾಮಿ ರೆಡ್ಡಿ, ರವಿಗೌಡ, ಶ್ರೀನಿವಾಸರೆಡ್ಡಿ, ಎಂ.ರಮೇಶ, ಶೇಖರಗೌಡ ಇತರರಿದ್ದರು. 
ಜಿಲ್ಲೆ

ಮಾ.1ರಿಂದ ಶಿವಯೋಗ ಕಾರ್ಯಕ್ರಮ

ಕಂಪ್ಲಿ: ಮಹಾಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಅಚರಿಸಲು ಫೆ.26ರಂದು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸಕಲೇಶ್ವರಿ ಅಕ್ಕ ಹೇಳಿದರು.

ಬ್ರಹ್ಮಕುಮಾರಿ ವಿವಿ ಆವರಣದಲ್ಲಿ ಸೋಮವಾರ ಮಹಾಶಿವರಾತ್ರಿ ಕಾರ್ಯಕ್ರಮದ ಕರಪತ್ರ ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮಹಾಶಿವರಾತ್ರಿ ಯಂದು ಪಟ್ಟಣದ ಓಂಶಾಂತಿ ಆವರಣದಲ್ಲಿ ಬೆಳಗ್ಗೆ 7.30ಕ್ಕೆ ಶಿವ ಧ್ವಜಾರೋಹಣ, ಬೆಳಗ್ಗೆ 9ಗಂಟೆಗೆ ಶಾಂತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಓಂಶಾಂತಿಯಲ್ಲಿ ಧ್ವನಿ ಮತ್ತು ಬೆಳಕಿನ ಚೈತನ್ಯ ದೃಶ್ಯಮಂಟಪದಲ್ಲಿ ಶಿವನ ಪ್ರತಿಮೆ ಸ್ಥಾಪಿಸಲಾಗುವುದು. ಜ್ಞಾನ ನೃತ್ಯದ ಮೂಲಕ ಭಾವೈಕ್ಯ ಜಾಗೃತಿ ಗೊಳಿಸಲಾಗುವುದು. ಮಾ.1ರಿಂದ ಮಾ.7ರತನಕ ಮಹಾಶಾಂತಿಗಾಗಿ ಶಿವಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಮಹಾಶಿವರಾತ್ರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಜನರಿಗೆ ಕರಪತ್ರ, ಈಶ್ವರೀಯ ವಿವಿ ಸಾಹಿತ್ಯದ ದಿನದರ್ಶಿಕೆ ವಿತರಿಸಲಾಯಿತು.

ಉಚಿತ ವಿತರಣೆ

ಕಲ್ಯಾಣಚೌಕಿಮಠ ಕಾಮಧೇನು ಗೋಶಾಲೆಯಿಂದ ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ಬೆಳಗ್ಗೆ 8ಗಂಟೆಯಿಂದ 9.30ರವರೆಗೆ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಉಚಿತವಾಗಿ, ಒಬ್ಬರಿಗೆ 100ಮಿ.ಲೀ.ಆಕಳ ಹಾಲು, 108 ಬಿಲ್ವಪತ್ರಿ, 11ಉತ್ತರಾಣಿಕಡ್ಡಿ ವಿತರಿಸಲಾಗುವುದು ಎಂದು ಗೋಶಾಲೆ ಅಧ್ಯಕ್ಷ ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ ತಿಳಿಸಿದ್ದಾರೆ.