ಕಂಪ್ಲಿ ತಾಲೂಕು ನಂ.3ಸಣಾಪುರ ಗ್ರಾಪಂ ಅಧ್ಯಕ್ಷೆಯಾಗಿ ಲಕ್ಷ್ಮೀ ಹನುಮಂತಪ್ಪ ಅವಿರೋಧ ಆಯ್ಕೆಗೊಂಡರು.  
ಜಿಲ್ಲೆ

ಲಕ್ಷ್ಮೀ ಹನುಮಂತಪ್ಪ ಸಣಾಪುರ ಗ್ರಾಪಂ ಅಧ್ಯಕ್ಷೆ

ಕಂಪ್ಲಿ: ತಾಲೂಕಿನ ನಂ.3ಸಣಾಪುರ ಗ್ರಾಪಂ ಅಧ್ಯಕ್ಷೆಯಾಗಿ ಲಕ್ಷ್ಮೀ ಹನುಮಂತಪ್ಪ ಮಂಗಳವಾರ ಅವಿರೋಧ ಆಯ್ಕೆಯಾದರು. ಹಿಂದಿನ ಅಧ್ಯಕ್ಷೆ ಸಾವಿತ್ರಿ ರಾಜೀನಾಮೆಯಿಂದ ತೆರವಾಗಿದ್ದ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಅಧ್ಯಕ್ಷೆ ಸ್ಥಾನಕ್ಕೆ ಲಕ್ಷ್ಮೀ ಹನುಮಂತಪ್ಪ ಹೊರತಾಗಿ ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿ ಕೆ.ಎಸ್.ಮಲ್ಲನಗೌಡ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಪಿಡಿಒ ಎಚ್.ಶೇಷಗಿರಿ, ಕಾರ್ಯದರ್ಶಿ ದೊಡ್ಡಬಸಪ್ಪ, ಗ್ರಾಪಂ ಸದಸ್ಯರಾದ ವೀರನಗೌಡ ರೆಡ್ಡಿ, ಹುಲಿಗೆಮ್ಮ ನಿಂಬೆಗಲು, ನಾಗಮ್ಮ, ಸಾವಿತ್ರಿ, ರಮಣಯ್ಯ ಎನ್ನುಂಟಿ, ಆರ್.ಕೆ.ಗವಿಸಿದ್ಧಪ್ಪ, ರತ್ನಮ್ಮ ಅಗೆದಾಳ್, ಸಣ್ಣಬಾಲೇಸಾಬ್, ಗೂಳಮ್ಮ ಕುರುಗೋಡು, ಈರಮ್ಮ ವಡ್ಡರ, ಪಕ್ಕೀರಪ್ಪ ಅಯೋದಿ, ಕೆ.ಭಾಸ್ಕರರೆಡ್ಡಿ, ಲಕ್ಷ್ಮೀದೇವಿ, ಜಿ.ವೆಂಕಟೇಶ್, ಆಂಥೋನಿ ಕಮಲಾಪುರ, ಕೆ.ಸಂಧ್ಯಾಗಾಯಿತ್ರಿ, ಜ್ಯೋತಿ, ಪ್ರಮುಖರಾದ ವೆಂಕಟರಾಮರಾಜು, ಸಿ.ಯಂಕಪ್ಪ, ರಘುರಾಮ್, ಸಿದ್ದಯ್ಯಸ್ವಾಮಿ, ಓ.ಪಿ.ದಾದಾ ಖಲಂದರ್, ಸಿಬ್ಬಂದಿ ಸುರೇಶ್, ಸುರೇಶ್‌ಬಂಡಾರಿ ಇತರರಿದ್ದರು.