ಕಂಪ್ಲಿಯ ಕ್ವೀನ್ ಮೇರಿ ಶಾಲೆಯಲ್ಲಿ ನಡೆದ ಎಸ್.ಎನ್.ಪೇಟೆ ಕ್ಲಸ್ಟರ್ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಛದ್ಮವೇಷ ಧರಿಸಿ ಗಮನ ಸೆಳೆದರು. ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಹೇಮಾವತಿ ಪೂರ್ಣಚಂದ್ರ, ಫಾದರ್ ಸುನೀಲ್, ಬೆನ್‌ದಿಕ್ತಾ, ರೇಣುಕಾರಾಧ್ಯ ಇತರರಿದ್ದರು. 
ಜಿಲ್ಲೆ

ಮಕ್ಕಳ ಪ್ರತಿಭೆ ಗುರುತಿಸುವ ಕೆಲಸವಾಗಲಿ

ಕುರುವತ್ತಿ ಶ್ರೀಕಾಂತಪ್ಪ

ಕಂಪ್ಲಿ: ಇಲ್ಲಿನ ಸಕ್ಕರೆ ಕಾರ್ಖಾನೆಯ ಕ್ವೀನ್‌ಮೇರಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಎಸ್.ಎನ್.ಪೇಟೆ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೋಮವಾರ ನಡೆಯಿತು.

ಅಕ್ಕಿಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ಮಕ್ಕಳ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪಾಲಕರು ಮಾಡಬೇಕು. ಮಕ್ಕಳ ಮನಸ್ಸನ್ನರಿತು ಶಿಕ್ಷಕರು ಶಿಕ್ಷಣ ನೀಡಬೇಕಿದ್ದು, ಒತ್ತಡ ಸಲ್ಲದು ಎಂದರು.

ಸಿಆರ್‌ಪಿ ರೇಣುಕಾರಾಧ್ಯ ಮಾತನಾಡಿ, 35 ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು 46 ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಮಕ್ಕಳು ಛದ್ಮವೇಷ ಧರಿಸುವಲ್ಲಿ ಪೈಪೋಟಿ ಕಂಡು ಬಂದಿತು. ದೇವತೆ ಮಾರಿಯಮ್ಮ, ಕಾಳಿಂಗಸರ್ಪದ ಮೇಲೆ ಶ್ರೀಕೃಷ್ಣ ನರ್ತನ, ಬೃಂದಾವನ, ಬುದ್ಧ, ಯಕ್ಷಗಾನ, ಬಯಲಾಟ ಪಾತ್ರಧಾರಿಗಳ ವೇಷ ಧರಿಸಿ ಮಕ್ಕಳು ಗಮನಸೆಳೆದರು.

ಪುರಸಭೆ ಸದಸ್ಯೆ ಹೇಮಾವತಿ ಪೂರ್ಣಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಸೇವಾಶ್ರಮದ ಮುಖ್ಯಸ್ಥ ಫಾದರ್ ಸುನೀಲ್, ಮುಖ್ಯಶಿಕ್ಷಕಿ ಬೆನ್ ದಿಕ್ತಾ, ಪ್ರಮುಖರಾದ ಟಿ.ವಿ.ಸುದರ್ಶನರೆಡ್ಡಿ, ಪವನ್‌ಕುಮಾರ್ ರೆಡ್ಡಿ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಭೂಮೇಶ್ವರ್, ಹನುಮಂತಪ್ಪ, ಸಿಇಒ ಜಿ.ವೀರೇಶ್, ಶಿಕ್ಷಕರಾದ ಯು.ರಾಜಶೇಖರ್, ಚಂದ್ರಯ್ಯ, ಎಂ.ರೇವಣಸಿದ್ದೇಶ್, ಜಡಿಯಪ್ಪ, ಇಮಾಂಸಾಬ್, ಶಂಕರಮೂರ್ತಿ ಇತರರಿದ್ದರು.